ಮಾನ್ವಿ: ಪಟ್ಟಣದ ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಶ್ರೀ ವೇಂಕಟೇಶ್ವರ ಪದವಿ ಮಹಾವಿದ್ಯಾಲಯ ಮಾನ್ವಿ ವತಿಯಿಂದ ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಶ್ರೀ ವೇಂಕಟೇಶ್ವರ ಪದವಿ ಮಹಾವಿದ್ಯಾಲಯ ಅಧ್ಯಕ್ಷರಾದ ಮಹಾಂತೇಶ ಓಲೇಕಾರ ಉದ್ಘಾಟಿಸಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಕಾಲೇಜನ್ನು ಪ್ರಾರಂಭಿಸಲಾಗಿದ್ದು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಉಪನ್ಯಾಸಕರು ಭೋದಿಸುವ ವಿಷಯಗಳನ್ನು ತಿಳಿದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಆಂಜನೇಯ ನಸಲಾಪುರ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಕೇವಲ ಅಂಕಗಳಿಸುವುದಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಹಾಗೂ ಉನ್ನತ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಅಬ್ದುಲ್ ಹಸನ್ ರಾಜ್ಯಶಾಸ್ತ್ರ ಹಿರಿಯ ಉಪನ್ಯಾಸಕರು ಮಾತನಾಡಿ ಕಲಿಕೆಗೆ ಹಾಗೂ ಉತ್ತಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಎಂದಿಗೂ ಕೂಡ ಬಡತನ ಕಾರಣವಾಗುವುದಿಲ್ಲ ಕಠಿಣ ಪರಿಶ್ರಮ ನಿರಂತರ ಕಲಿಕೆಯಿಂದ ಮಾತ್ರ ಸಾಧ್ಯವಾಗುತ್ತದೆ ಆದ್ದರಿಂದ ಪ್ರತಿ ವಿದ್ಯಾರ್ಥಿ ಕೂಡ ಉನ್ನತವಾದ ಗುರಿಯನ್ನು ಜೀವನದಲ್ಲಿ ಹೊಂದಿ ಗುರಿಯನ್ನು ತಲುಪುವುದಕ್ಕೆ ಪ್ರಮಾಣಿಕವಾಗಿ ಶ್ರಮಿಸಿದಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ತಿಳಿಸಿದರು ಕಾ.ನಿ.ಪ.ಸಂಘದಿಂದ ಜಿಲ್ಲಾ ಉತ್ತಮ ವರದಿಗಾರರಾಗಿ ಸನ್ಮಾನಿತರಾದ ಹಿರಿಯ ವರದಿಗಾರರು ಈಶಪ್ಪ ಬೈಲ್ ಮರ್ಚೆಡ್ ಹಾಗೂ ರಾಜಶೇಖರ ಹೆಚ್ ರವರನ್ನು ಕಾಲೇಜ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಬಾಲಕಿಯರ ಸ ಪ ಪೂ ಕಾಲೀಜಿನ ಪ್ರಾಚಾರ್ಯರಾದ ಸೈಯದ್ ಮುಜೀಬ್ ಅಹ್ಮದ್ ಶ್ರೀ ವೆಂಕಟೇಶ್ವರ ಫ್ರೌಡಶಾಲೆ ಆಢಳಿತಾಧಿಕಾರಿ ಶಂಕರಪ್ಪ ನಕ್ಕುಂದಿ ಮುಖ್ಯಗುರು ಚಂದ್ರಶೇಖರ ಪಾಟೀಲ್ ಡಾ.ಹುಲಿಯಪ್ಪ ದುಮತಿ ಅಂಬಣ್ಣ ನಾಯಕ ಶರಣಬಸವ ಬಂದೇನವಾಜ್ ಆಫ್ರಿನ ಬೇಗಂ, ಸಂತೋಷಕುಮಾರ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಆಂಜನೇಯ ನಸಲಾಪುರ


