LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ವಿಜಯೇಂದ್ರ ಏನೇ ಪಾದಯಾತ್ರೆ ಮಾಡಿದ್ರೂ ರಾಜ್ಯಾಧ್ಯಕ್ಷ ಸ್ಥಾನದಿಂದ ಔಟ್ ಫಿಕ್ಸ್ : ಯತ್ನಾಳ್ 

Advertisement

ವಿಜಯಪುರ : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದು, ಪಕ್ಷದ ಹುದ್ದೆಯಿಂದ ತಮ್ಮನ್ನು ತೆಗೆದುಹಾಕುವುದು ಖಚಿತವಾದ ಹಿನ್ನೆಲೆಯಲ್ಲಿಯೇ ಅವರು ಪಾದಯಾತ್ರೆ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯೇಂದ್ರ ಅವರ ರಾಜಕೀಯ ಅವಧಿ ಅಥವಾ ವಾರಂಟಿ ಮುಗಿದಿದ್ದು, ಹುದ್ದೆ ಉಳಿಸಿಕೊಳ್ಳಲು ಹಾಗೂ ತಮ್ಮ ಅಸ್ತಿತ್ವ ಪ್ರದರ್ಶಿಸಲು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಜಯಪುರದಲ್ಲಿ ವ್ಯಂಗ್ಯವಾಡಿದ್ದಾರೆ.

ವಿಪಕ್ಷ ನಾಯಕರು ಸದನದ ಬಾವಿಗಿಳಿದು ಧರಣಿ ನಡೆಸಿದಾಗ ವಿಜಯೇಂದ್ರ ಕನಿಷ್ಠ ಐದು ನಿಮಿಷವೂ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ದೂರಿದ ಯತ್ನಾಳ್, ಕೇವಲ ಪಾದಯಾತ್ರೆ ಮಾಡುವುದರಿಂದ ಯಾರಿಗೂ ನಾಯಕತ್ವದ ಶ್ರೇಯಸ್ಸು ಸಿಗುವುದಿಲ್ಲ ಎಂದಿದ್ದಾರೆ. ನಿಜಕ್ಕೂ ಜನಪರ ಕಾಳಜಿ ಮತ್ತು ಹೋರಾಟದ ಮನೋಭಾವ ಇದ್ದರೆ ರಾಜ್ಯದಲ್ಲಿ ನಡೆದಿರುವ ಕೆಪಿಎಸ್‌ಸಿ ಅಕ್ರಮ ಹಾಗೂ ಹಗರಣಗಳ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ತೀವ್ರಗೊಂಡಿರುವುದಕ್ಕೆ ಯತ್ನಾಳ್ ಅವರ ಈ ಹೇಳಿಕೆ ಸ್ಪಷ್ಟ ಸಾಕ್ಷಿಯಾಗಿದೆ.

ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭಯದಿಂದ ಕೈಗೊಂಡಿರುವ ಈ ಪಾದಯಾತ್ರೆ ಯಾರಿಗೆ ಪ್ಲಸ್ ಅಥವಾ ಮೈನಸ್ ಆಗುತ್ತದೆ ಎಂಬುದು ಬೇರೆ ವಿಚಾರ, ಆದರೆ ಕಮಲ ಪಾಳೆಯದ ಗೊಂದಲಗಳನ್ನು ಇದು ಮತ್ತಷ್ಟು ಹೆಚ್ಚಿಸಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SAD NEWS : ಬಾಲಿವುಡ್ ಹಿರಿಯ ನಟ 'ನಾನಾ ಪಾಟೇಕರ್' ಇನ್ನಿಲ್ಲ ಕೆನ್ಸೋ ಸೊಐ, ಹೆನ್ರಿ ಕಗಾನ್ ಗೆ, 2026ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಎರಡು ದಿನಗಳಲ್ಲಿ ರೈತರ ಖಾತೆಗೆ 2500 ರೂ. ಜಮಾ: ಡಾ. ಜಿ. ಪರಮೇಶ್ವರ್ಬೇರೆ ಕಡೆ ನೆಲೆಸಿದ್ದರೂ ವಂಶವೃಕ್ಷ ಸಿಗುತ್ತದೆ : ಹೈಕೋರ್ಟ್‌ ಇಂದು ಬೆಂಗಳೂರಿನಲ್ಲಿ ಸಿಜೆಪಿಯಿಂದ ಬೃಹತ್ ಪ್ರತಿಭಟನೆ: ಧ್ರುವ್ ರಾಠಿ, ಪ್ರಕಾಶ್ ರಾಜ್ ಭಾಗಿವಿಧಾನಸಭೆ ಕಲಾಪದ ಅಣುಕು ಪ್ರದರ್ಶನ ಗಮನ ಸೆಳೆಯಲಿರುವ ವಿದ್ಯಾರ್ಥಿಗಳ ಯುವ ಸಂಸತ್ತುಜಿಪಂ ಚುನಾವಣೆ : 1129 ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟ ರಾಜ್ಯಾಧ್ಯಂತ 'ಹಾಫ್ ಹೆಲ್ಮೆಟ್‌'ಗೆ ಸಂಪೂರ್ಣ ನಿಷೇಧ: ಉಲ್ಲಂಘಿಸಿದರೇ ದಂಡ ಫಿಕ್ಸ್! ಮುಂದಿನ ವಾರ ಏಕದಿನ ತಂಡದ ಆಯ್ಕೆ ಸಾಧ್ಯತೆ ರಣಜಿ ತಂಡದಿಂದಲೂ ಸೂರ್ಯಕುಮಾರ್ ಗೆ ಕೊಕ್