LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಖಾಸಗಿ ಚಾನೆಲ್ ನಡೆಸುತ್ತಿರುವ ಹಳ್ಳಿಯ ಪವರ್ ಕಾರ್ಯಕ್ರಮಕ್ಕೆ  ಕಲಾಪೋಷಕರ ಸಿದ್ದನ ಕೊಳ್ಳ ಮಠಕ್ಕೆ ಆಹ್ವಾನ ಏಕೆ ಇಲ್ಲ 

Advertisement

ಬಾಗಲಕೋಟೆ : ಜಿಲ್ಲೆಯ ಐಹೊಳೆ ಗ್ರಾಮದಲ್ಲಿ ಖಾಸಗಿ ಚಾನೆಲ್ ವತಿಯಿಂದ ನಡೆಸುತ್ತಿರುವ ಹಳ್ಳಿಯ ಪವರ್ ಶೋ ದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಕ್ಕೆ ಪಕ್ಕದಲ್ಲಿಯೇ ಇದ್ದ ಸಿದ್ದನಕೊಳ್ಳದ ಡಾ  ಶಿವಕುಮಾರ ಸ್ವಾಮೀಜಿ ಆಹ್ವಾನ ನೀಡದೆ ಇರುವುದು ಈಗ ಚರ್ಚೆಯ ವಿಷಯವಾಗುತ್ತಿದೆ.
  
ಖಾಸಗಿ ವಾಹಿನಿಯೊಂದರ "ಹಳ್ಳಿಯ ಪವರ್" ಅಥವಾ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಭಾಗದ ನೈಜ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಐತಿಹಾಸಿಕ ಮಠಗಳಿಗೆ ಸರಿಯಾದ ಪ್ರಾತಿನಿಧ್ಯ ನೀಡದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಅಸಮಾಧಾನ ಮತ್ತು ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಸಿದ್ಧನಕೊಳ್ಳ ಮಠವು ದಶಕಗಳಿಂದಲೂ ನಾಟಕ, ಜಾನಪದ ಕಲೆ, ತತ್ವಪದ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಾ ಬಂದಿದೆ.

ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸಿದ್ಧನಕೊಳ್ಳ ಕಲಾಪೋಷಕ ಮಠ ದ ಡಾ ಶ್ರೀ ಶಿವಕುಮಾರ ಸ್ವಾಮೀಜಿ ಕಲಾವಿದರನ್ನು ಬೆಳೆಸುವ ಮಠವಾಗಿದ್ದು,ಪ್ರತಿ ವರ್ಷ ಸಿದ್ದಶ್ರೀ ಉತ್ಸವ ಮಾಡಿ ಖ್ಯಾತ ನಟ ನಟಿಯರನ್ನು ಕಲಾವಿದರನ್ನು ಕರೆಯಿಸಿ ಗೌರವಿಸಿ ಪ್ರೋತ್ಸಾಹಿಸುತ್ತಾರೆ.

ಖಾಸಗಿ ಚಾನೆಲ್‌ಗಳು ಟಿಆರ್‌ಪಿ (TRP) ಹಾಗೂ ವಾಣಿಜ್ಯ ಲಾಭಕ್ಕಾಗಿ ಕೇವಲ ಗ್ಲಾಮರ್ ಅಥವಾ ನಗರ ಕೇಂದ್ರಿತ ವಿಷಯಗಳಿಗೆ ಆದ್ಯತೆ ನೀಡುತ್ತಿದ್ದು  ಗ್ರಾಮೀಣ ಭಾಗದ ನಿಜವಾದ ಸಾಂಸ್ಕೃತಿಕ ಶಕ್ತಿಯಾಗಿರುವ ಸಿದ್ಧನಕೊಳ್ಳದಂತಹ ಮಠಗಳ ಕೊಡುಗೆಯನ್ನು ಕಡೆಗಣಿಸುತ್ತಿವೆ ಎಂಬುದು ಕಲಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.


ಬಾಗಲಕೋಟೆ ಜಿಲ್ಲೆಯ ಇಳಕಲ ತಾಲೂಕಿನ ಸುಕ್ಷೇತ್ರ ಶ್ರೀ ಸಿದ್ಧನಕೊಳ್ಳ ಕಲಾ ಪೋಷಕ ಮಠ ಗ್ರಾಮೀಣ ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಲ್ಲಿನ ಶ್ರೀಗಳಾದ ಡಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಪ್ರಮುಖ ಪಾತ್ರ ವಹಿಸಿದ್ದಾರೆ. 

 ಆದರೆ ಪಕ್ಕದಲ್ಲಿಯೇ ಹಳ್ಳಿಯ ಪವರ್ ನಕುಲ ನಡೆಸಿಕೊಡುವ ಶೋ ಗೆ ವಿವಿಧ ಕಲಾವಿದರಿಗೆ ಹಾಗೂ ನಟರಿಗೆ ಕರೆಯಿಸಿ ಕಾರ್ಯಕ್ರಮ ಮಾಡುತ್ತಿದ್ದಾರೆ ಆದರೆ ಸ್ವಾಮೀಜಿಗಳಿಗೆ ಮಾತ್ರ ಆಹ್ವಾನ ನೀಡದೆ ಇರುವುದು ಭಕ್ತರಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

 ಸಿದ್ಧನಕೊಳ್ಳ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಉತ್ತರ ಕರ್ನಾಟಕದ ರಂಗಭೂಮಿ, ಜಾನಪದ ಕಲೆ ಮತ್ತು ಸ್ಥಳೀಯ ಕಲಾವಿದರಿಗೆ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವ ಅಪರೂಪದ ಕಲಾ ಪೋಷಕ ಮಠವಾಗಿದೆ.

ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ  ಈ ಮಠಕ್ಕೆ ಭೇಟಿ ನೀಡಿ ಇಲ್ಲಿನ ಶ್ರೀಗಳ ಆಶೀರ್ವಾದ ಪಡೆದಿದ್ದರು ಎಂಬ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಈ ಮಠಕ್ಕಿದೆ ಜಿಲ್ಲೆಯಲ್ಲಿ ಯಾವುದೇ ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ದೊಡ್ಡ ಕಾರ್ಯಕ್ರಮಗಳು ಜರುಗಿದರೂ, ಅಲ್ಲಿಗೆ ಮಠದ ಶ್ರೀಗಳಿಗೆ ಮೊದಲ ಆಹ್ವಾನ ನೀಡುವುದು ಇಲ್ಲಿನ ವಾಡಿಕೆ ಹಾಗೂ ಪರಂಪರೆಯಾಗಿದೆ.

ಸದ್ಯ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿರುವ 'ಹಳ್ಳಿ ಪವರ್' ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಿದ್ಧನಕೊಳ್ಳ ಮಠದ ಶ್ರೀಗಳಿಗೆ ಆಹ್ವಾನ ನೀಡದಿರುವುದು ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ  ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುವ ಈ ಮಠಕ್ಕೆ ಇಂತಹ ಜನಪ್ರಿಯ ಕಾರ್ಯಕ್ರಮದಲ್ಲಿ ನಿರ್ಲಕ್ಷ್ಯ ತೋರಿಸುವುದು ಏಕೆ ಎಂಬುದು ಯಕ್ಷಪ್ರಶ್ನೆವಾಗಿ ಉಳಿದಿದೆ.

ರಾಜಕೀಯ ಹುನ್ನಾರವೇ ಅಥವಾ ಕೆಲವರಲ್ಲಿ ಸ್ವ ಹಿತಾಸಕ್ತಿಯ ಷ್ಯಡಂತ್ರವೇ ಎಂಬುದು ಚರ್ಚೆ ಆಗುತ್ತಿದೆ.
news_1791012232_0_983.webp

 

ಹಳ್ಳಿಯ ಪವರ್ ಶೋ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ ಆಗಮಿಸುತ್ತಿರುವ ಬಗ್ಗೆ ಮಾಹಿತಿ ಇದೆ  ಆದರೆ ತಮ್ಮ ತಂದೆಯವರಂತೆ ಸಿದ್ಧನಕೊಳ್ಳ ಕಲಾಪೋಷಕ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುವರೇ ಎಂಬುದೇ ಕುತೂಹಲ ಮೂಡಿದೆ  ತಮ್ಮ ತಂದೆಯವರ ಹೆಜ್ಜೆಗುರುತನ್ನು ಉಳಿಸಿಕೊಳ್ಳುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ.

ಮಾಧ್ಯಮಗಳು ಮತ್ತು ರಿಯಾಲಿಟಿ ಶೋಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಕಲೆಗಳನ್ನು ಜೀವಂತವಾಗಿಟ್ಟಿರುವ ಸಾಂಸ್ಕೃತಿಕ ಕೇಂದ್ರಗಳನ್ನು ಗುರುತಿಸಿ ಗೌರವಿಸಬೇಕು ಇಲ್ಲಿನ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದವರು, ಭಕ್ತರು ಹಾಗೂ ಸಾರ್ವಜನಿಕರ ಒತ್ತಾಯ ಹೆಚ್ಚಾಗಿದೆ.
ವರದಿ : ಬಸವರಾಜ ಪೂಜಾರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SAD NEWS : ಬಾಲಿವುಡ್ ಹಿರಿಯ ನಟ 'ನಾನಾ ಪಾಟೇಕರ್' ಇನ್ನಿಲ್ಲ ಕೆನ್ಸೋ ಸೊಐ, ಹೆನ್ರಿ ಕಗಾನ್ ಗೆ, 2026ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಎರಡು ದಿನಗಳಲ್ಲಿ ರೈತರ ಖಾತೆಗೆ 2500 ರೂ. ಜಮಾ: ಡಾ. ಜಿ. ಪರಮೇಶ್ವರ್ಬೇರೆ ಕಡೆ ನೆಲೆಸಿದ್ದರೂ ವಂಶವೃಕ್ಷ ಸಿಗುತ್ತದೆ : ಹೈಕೋರ್ಟ್‌ ಇಂದು ಬೆಂಗಳೂರಿನಲ್ಲಿ ಸಿಜೆಪಿಯಿಂದ ಬೃಹತ್ ಪ್ರತಿಭಟನೆ: ಧ್ರುವ್ ರಾಠಿ, ಪ್ರಕಾಶ್ ರಾಜ್ ಭಾಗಿವಿಧಾನಸಭೆ ಕಲಾಪದ ಅಣುಕು ಪ್ರದರ್ಶನ ಗಮನ ಸೆಳೆಯಲಿರುವ ವಿದ್ಯಾರ್ಥಿಗಳ ಯುವ ಸಂಸತ್ತುಜಿಪಂ ಚುನಾವಣೆ : 1129 ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟ ರಾಜ್ಯಾಧ್ಯಂತ 'ಹಾಫ್ ಹೆಲ್ಮೆಟ್‌'ಗೆ ಸಂಪೂರ್ಣ ನಿಷೇಧ: ಉಲ್ಲಂಘಿಸಿದರೇ ದಂಡ ಫಿಕ್ಸ್! ಮುಂದಿನ ವಾರ ಏಕದಿನ ತಂಡದ ಆಯ್ಕೆ ಸಾಧ್ಯತೆ ರಣಜಿ ತಂಡದಿಂದಲೂ ಸೂರ್ಯಕುಮಾರ್ ಗೆ ಕೊಕ್