Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಪದವಿ ಕಾಲೇಜಿನ ಭರವಸೆ ಈಡೇರಿಲ್ಲವೇಕೆ : ಶಿವಾನಂದ ಯಡಳ್ಳಿ

Advertisement

ವಿಜಯಪುರ : ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ 2026-27ನೇ ಸಾಲಿನ ಬಜೆಟ್ ನಲ್ಲಿ ಪಟ್ಟಣಕ್ಕೆ ಸರಕಾರಿ ಪದವಿ ಕಾಲೇಜಿಗೆ ಅನುಮೋದನೆ ಪಡೆದಿದ್ದೇನೆ ಎಂದು ಹೇಳುವ ಶಾಸಕ ವಿಠಲ ಕಟಕದೊಂಡ ಅವರು. ಈವರೆಗೂ ಪಟ್ಟಣದಲ್ಲಿ ಕಾಲೇಜು ಆರಂಭಿಸಿಲ್ಲ ಏಕೆ ಎಂದು ಕೆಆರ್‌ಎಸ್ ಪಕ್ಷದ ಸಂಘಟನಾ ರಾಜ್ಯ ಕಾರ್ಯದರ್ಶಿ ಶಿವಾನಂದ ಯಡಳ್ಳಿ ಪ್ರಶ್ನಿಸಿದರು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಚಡಚಣದಲ್ಲಿ ಪದವಿ ಕಾಲೇಜು `ಪ್ರಾರಂಭಿಸುವುದಾಗಿ ಹೇಳಿ, ವಿಳಂಬ ನೀತಿ ಅನುಸರಿಸುತ್ತಿರುವ ಶಾಸಕರು ತಮ್ಮ ಇಚ್ಛಾಶಕ್ತಿಯ ಕೊರತೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಪಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಮೇ 26 ರಿಂದ ಎಲ್ಲ ಕಡೆ ಶಾಲಾ- ಕಾಲೇಜುಗಳು ಪ್ರಾರಂಭವಾಗುತ್ತವೆ. ಆದರೆ, ಪಟ್ಟಣದಲ್ಲಿ ಮಂಜೂರಾಗಿರುವ

ಕಾಲೇಜು ಮಾತ್ರ ಆರಂಭವಾಗುವ ಮಾಡಿಲ್ಲ. ಯಾವುದೇ ಲಕ್ಷಣ ಅಲ್ಲದೇ ಮಂಜೂರಾಗಿರುವ ಸರಕಾರಿ ಕಾಲೇಜಿಗೆ ಉಪನ್ಯಾಸಕರನ್ನು ಹಾಗೂ ಕಾಣುತ್ತಿಲ್ಲ. ಸಿಬ್ಬಂದಿಯನ್ನು ನಿಯೋಜನೆ ಬಹುಮುಖ್ಯವಾಗಿ ಕಾಲೇಜು ಆರಂಭಕ್ಕೆ ಪಟ್ಟಣದಲ್ಲಿ ಸ್ಥಳವನ್ನು ಕೂಡ ಈವರೆಗೂ ಗುರುತಿಸದೇ ನಿಷ್ಕಾಳಜಿ ತೋರುತ್ತಿದ್ದಾರೆ. ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ಆಗಿರುವ ಈ ಭಾಗದ ಬಡ ವಿದ್ಯಾರ್ಥಿಗಳ ಹಿತ ಕಾಪಾಡಬೇಕಾದ ಶಾಸಕರು ಏಕೆ ಕಡೆಗಣಿಸುತ್ತಿದ್ದಾರೋ ಗೊತ್ತಿಲ್ಲ ಕೂಡಲೇ ಕಾಲೇಜು ಆರಂಭಿಸಬೇಕು. ಇಲ್ಲದೇ ಹೋದರೆ ನಮ್ಮ ಪಕ್ಷದಿಂದ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಜಿಲ್ಲಾ ಕಾರ್ಯದರ್ಶಿ ರಾಕೇಶ ಇಂಗಳಗಿ, ದುರ್ಗಪ್ಪ ಬೂದಿಹಾಳ, ನಗರ ಘಟಕ ಅಧ್ಯಕ್ಷ ಅಣ್ಣ ಪೂಜಾರಿ ಸದಸ್ಯರಾದ ನಾರಾಯಣ ನಾಯಕ, ಪೃಥ್ವಿ ಪೂಜಾರಿ ಇನ್ನಿತರರಿದ್ದರು.

ವರದಿ : ಎಸ್.ಎಸ್.ಬಗಲಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST