ಬೆಂಗಳೂರು: ಜೀವನಾಂಶ ಎನ್ನುವುದು ಕೇವಲ ಹಣಕಾಸಿನ ನೆರವಲ್ಲ, ಅದು ಮಹಿಳೆಯ ಶಾಸನಬದ್ಧ ಹಕ್ಕಾಗಿದೆ. ಕೇವಲ ತಾಂತ್ರಿಕ ಕಾರಣಗಳನ್ನು ಒಡ್ಡಿ ಅಥವಾ ಪತ್ನಿ ಪತಿಯೊಂದಿಗೆ ವಾಸಿಸುತ್ತಿಲ್ಲ ಎಂಬ ನೆಪದಲ್ಲಿ ಈ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೇಂದ್ರ ಸರ್ಕಾರಿ ನೌಕರರಾಗಿರುವ ಪತಿ ಮತ್ತು ಅವರ ಪತ್ನಿಯ ನಡುವಿನ ಈ ಪ್ರಕರಣದಲ್ಲಿ, 2024ರ ಜುಲೈನಲ್ಲಿ ಕೌಟುಂಬಿಕ ನ್ಯಾಯಾಲಯವು ತೀರ್ಪು ನೀಡಿತ್ತು.
ಅಂದು ನ್ಯಾಯಾಲಯವು ಇಬ್ಬರು ಮಕ್ಕಳಿಗೆ ತಲಾ 8,000 ರೂ. ಜೀವನಾಂಶ ನಿಗದಿಪಡಿಸಿತ್ತಾದರೂ, ಪತ್ನಿ ಪತಿಯೊಂದಿಗೆ ವಾಸಿಸಬೇಕು ಎಂಬ ಆದೇಶವನ್ನು ಪಾಲಿಸದ ಕಾರಣ ಆಕೆಗೆ ಜೀವನಾಂಶ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ 40 ವರ್ಷದ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.


