Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಟ ದರ್ಶನ್ ಜೊತೆ ಟೀ ಕುಡಿದಿದ್ದ ವಿಲ್ಸನ್ ಗಾರ್ಡನ್ ನಾಗ ಹಿಂಡಲಗಾ ಜೈಲಿನಿಂದ ರಿಲೀಸ್ 

Advertisement

ಬೆಳಗಾವಿ : ನಟ ದರ್ಶನ್ ಜೊತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಹಾ ಕುಡಿಯುತ್ತ ಕುಳಿತಿದ್ದ ಫೋಟೋ ವೈರಲ್ ಆದ ಬಳಿಕ ಸುದ್ದಿಯಾಗಿದ್ದ ಬೆಂಗಳೂರಿನ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಗುರುವಾರ ಬೆಳಗಾವಿಯ ಹಿಂಡಲಗಾ ಕಾರಾಗೃಹದಿಂದ ಆತನನ್ನು ಬಿಡುಗಡೆ ಮಾಡಲಾಗಿದೆ.

ಸಿಗದನಪಾಳ್ಯ ಮಹೇಶ್ ಕೊಲೆ ಪ್ರಕರಣದ ಆರೋಪಿ

ಸಿಗದನಪಾಳ್ಯ ಮಹೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಾಗರಾಜ, ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಜೊತೆ ಕಂಡುಬಂದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. 

ಈ ಘಟನೆ ನಂತರ ಜೈಲು ಭದ್ರತೆ ಹಾಗೂ ಕೈದಿಗಳ ನಿಯಮ ಉಲ್ಲಂಘನೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಉಂಟಾಗಿತ್ತು. ವಿವಾದದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದರು.

ನಂತರ ಈ ಪ್ರಕರಣ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಬುಧವಾರ ನ್ಯಾಯಾಲಯವು ನಾಗರಾಜನಿಗೆ ಜಾಮೀನು ಮಂಜೂರು ಮಾಡಿದೆ ಆದರೆ, ಬಿಡುಗಡೆ ಪ್ರಕ್ರಿಯೆಯ ಮುನ್ನವೇ ಆತನ ಆರೋಗ್ಯದಲ್ಲಿ ತೊಂದರೆ ಉಂಟಾದ ಕಾರಣ ಕಳೆದ ವಾರ ಆತನನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಅವಧಿಯಲ್ಲೇ ಜಾಮೀನು ಆದೇಶ ಜಾರಿಯಾಗಿದ್ದು, ಆಸ್ಪತ್ರೆಯಿಂದಲೇ ಆತನನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ರಾನ್ಸ್ನಲ್ಲಿ ವಿಶ್ವದ ಅಗ್ರಗಣ್ಯ ನಾಯಕರ ಜಿ-೭ ಸಭೆರಾಜ್ಯದ ಅರ್ಹರಿಗಷ್ಟೇ ಗ್ಯಾರಂಟಿ ಯೋಜನೆಗಳು : ಎಂ. ಬಿ. ಪಾಟೀಲ ಬೆಂಗಳೂರಿನ ಹಲವು ಆರ್ ಟಿ ಓ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶಬೆಳಗಾವಿಯಲ್ಲಿ ಕಸದ ರಾಶಿಯಲ್ಲಿ ಒಟ್ಟು 59 ಜೀವಂತ ಗುಂಡುಗಳು ಪತ್ತೆಚಿಕ್ಕ ಪಾನ್ ಅಂಗಡಿಗೆ 1.85 ಲಕ್ಷ ರೂ. ವಿದ್ಯುತ್ ಬಿಲ್ : ಭಯದಿಂದ ವ್ಯಾಪಾರಿ ಆತ್ಮಹತ್ಯೆ ಬಸ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಇಬ್ಬರು ಅಪ್ರಾಪ್ತ ಅಕ್ಕ-ತಂಗಿಯ ಮೇಲೆ ಕಿರಾತಕನಿಂದ ಲೈಂಗಿಕ ದೌರ್ಜನ್ಯಡಾಕ್ಟರ್ ಚೀಟಿ ಇಲ್ಲದೇ ಯಾವುದೇ ಕೆಮ್ಮಿನ ಔಷಧ ಮಾರಾಟ ಮಾಡುವಂತಿಲ್ಲ : ಕೇಂದ್ರ ಸರ್ಕಾರಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಸೋಮವತಿ ಅಮಾವಾಸ್ಯೆ ಅಂಗವಾಗಿ ಖಾನಾಪುರದಲ್ಲಿ ಶ್ರೀ ಮೈಲಾರ ಮಲ್ಲಣ್ಣನ ಪಲ್ಲಕ್ಕಿ ಉತ್ಸವ ವೈಭವ