Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯೋಗೀಶ್ ಗೌಡ ಕೊಲೆ ಪ್ರಕರಣ : ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ರಾಡ್, ವೈರ್‌ನಿಂದ ಹೊಡೆದಾಟ

Advertisement
ಧಾರವಾಡ : ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಾಜಿ ಜಿ.ಪಂ. ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ತೀರ್ಪು ಹೊರಬೀಳುವ ಹಂತದಲ್ಲಿದೆ. ಆದರೆ, ಇತ್ತ ಯೋಗೀಶ್ ಗೌಡ ಅವರ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ದೊಡ್ಡ ಮಟ್ಟದ ಕಿತ್ತಾಟ ಶುರುವಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ತೋಟದ ಮನೆಯಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಯೋಗೀಶ್ ಗೌಡ ಅವರ ಸಹೋದರ ಗುರುನಾಥ ಗೌಡ ಮತ್ತು ಸಹೋದರಿಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಗುರುನಾಥ ಗೌಡ ಮತ್ತು ಅವರ ಪತ್ನಿ ಜ್ಯೋತಿ ಗೌಡ ಅವರು ಕಬ್ಬಿಣದ ರಾಡ್ ಹಾಗೂ ವೈರ್‌ನಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ. ಸಹೋದರಿಯರಾದ ಜಗದೀಶ್ವರಿ ಮತ್ತು ಅಕ್ಕಮಹಾದೇವಿ ಅವರು ಈ ಘಟನೆಯ ಬಗ್ಗೆ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗುರುನಾಥ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕಿತ್ತಾಟದ ಆಡಿಯೋ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಗ್ರಾಮಾಂತರ ಪೊಲೀಸರು ಗುರುನಾಥ ಗೌಡ ಹಾಗೂ ಅವರ ಪತ್ನಿ ಜ್ಯೋತಿ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣದ ಅಂತಿಮ ಹಂತದಲ್ಲಿ ಕುಟುಂಬದ ಈ ಆಂತರಿಕ ಕಲಹ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

 

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತೇವಗೊಂಡ ಮೈದಾನ: ಆರ್‌ಸಿಬಿ ಪಂದ್ಯ ವಿಳಂಭ ಮೊದಲ ಟೆಸ್ಟ್ಗೆ ಇಂಗ್ಲೆAಡ್ ತಂಡದಾಯ್ಕೆಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿಹಿಜಾಬ್ ನಿಷೇಧ ವಾಪಸ್ ಪಡೆದ ರಾಜ್ಯ ಸರ್ಕಾರ ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು : ಬಿ. ಕೆ ಹರಿಪ್ರಸಾದ್ ಮಣ್ಣಲ್ಲಿ ಮಣ್ಣಾದ ನಟ ದಿಲೀಪ್ ರಾಜ್ : ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ಇನ್ಮುಂದೆ ಮೆಟ್ರೋದಲ್ಲಿ ಪ್ರಯಾಣ, ವಾಹನ ಬಳಕೆ ಶೇ. 40 ರಷ್ಟು ಕಡಿತ : ಆರ್. ಅಶೋಕ್ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಆಕ್ರೋಶ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅನನ್ಯ :ವಸಂತ ಎಸ್ಚರಂಡಿ ಸ್ವಚ್ಛಗೊಳಿಸಿ, ರೋಗಭಯವಿಲ್ಲದೆ ಬದುಕುವಂತೆ ಮಾಡಿ : ನಾಗರೀಕರ ಆಗ್ರಹ