ಕೋಲ್ಕತ್ತಾ: ‘ನೀವು ನನಗೆ ಮತ ನೀಡಿ, ನಾನು ನಿಮಗೆ ಪಶ್ಚಿಮ ಬಂಗಾಳದ ಜಂಗಲ್ ರಾಜ್ಯದಿಂದ ಸ್ವತಂತ್ರ ನೀಡುತ್ತೇನೆ, ಹೀಗೆಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ ಮತದಾರರಿಗೆ ಕರೆ ನೀಡಿದ್ದಾರೆ.
ಹೌದು ಪಶ್ಚಿಮ ಬಂಗಾಳ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಭರ್ಜರಿ ಪ್ರಚಾರ ನಡೆಸಿರುವ ನರೇಂದ್ರ ಮೋದಿ ಅವರು ಮತದಾರರನ್ನು ಉದ್ದೇಶಿಸಿ ಹೀಗೆ ಚುನಾವಣೆ ಪ್ರಚಾರ ಸಭೆಗಳಲ್ಲಿ ಮತದಾರರಿಗೆ ಕರೆ ನೀಡಿದ್ದಾರೆ.
ಹಿಂದೆ ಸ್ವಾತಂತ್ರö್ಯಕ್ಕೆ ಮುನ್ನ ಸುಭಾಷ್ ಚಂದ್ರ ಬೋಷ್ ಅವರು ಸ್ವಾತಂತ್ರö್ಯ ಸಂಗ್ರಾಮದ ವೇಳೆ ಜನರನ್ನು ಉದ್ದೇಶಿಸಿ ಮಾತನಾಡುತ್ತ ‘ನೀವು ರಕ್ತ ಕೊಡಿ ನಾನು ನಿಮಗೆ ಸ್ವತಂತ್ರö್ಯ ಕೊಡಿಸುತ್ತೇನೆ ಎಂದು ಕರೆ ನೀಡಿದ ರೀತಿಯಲ್ಲೇ ಇಂದು ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಮತದಾರರಿಗೆ ಕರೆ ನೀಡುವ ಮೂಲಕ ಗಮನ ಸಳೆದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಾಗೂ ತಮಿಳುನಾಡಿನಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಮತದಾನ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

