ಮುಂಬೈ: ಬುಧವಾರ ಭಾರತೀಯ ಷೇರುಮಾರುಕಟ್ಟೆ, ಅಲ್ಪ ಪ್ರಮಾಣದ ಏರಿಕೆಯೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಕೆಲವೇ ಅಂಕಗಳ ಏರಿಕೆ ಕಂಡಿದೆ.
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ
ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.020ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಶೇ.0.13ರಷ್ಟು, ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಕೇವಲ 16.09 ಅಂಕಗಳ ಏರಿಕೆಯೊಂದಿಗೆ 81,526.14 ಅಂಕಗಳಿಗೆ ಏರಿದ್ದರೆ, ನಿಫ್ಟಿ 31.75 ಅಂಕಗಳ ಅಲ್ಪ ಏರಿಕೆಯೊಂದಿಗೆ 24.641.80 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು
ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ವಿಭಾಗದ ಷೇರುಗಳ ಮೌಲ್ಯ ಕುಸಿತವಾಗಿದ್ದು, ದಿನದ ವಹಿವಾಟು ಅಂತ್ಯವಾಗ ಕೊನೆಯ ಕ್ಷಣಗಳಲ್ಲಿ ಐಟಿ ವಲಯದ ಷೇರುಗಳ ಖರೀದಿ ಭರಾಟೆಯಿಂದಾಗಿ ಇಂದು
ಮಾರುಕಟ್ಟೆ ಗ್ರೀನ್ ನಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ