Join The Telegram | Join The WhatsApp |
ಬೆಂಗಳೂರು: ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಇದೇ ಜನವರಿ 21, 22 ರಂದು ಆಯೋಜಿಸಿರುವ ಉತ್ತರ ಕರ್ನಾಟಕ ಉತ್ಸವ 2023 ಕಾರ್ಯಕ್ರಮದ ಲೋಗೊವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದರು.
ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯು ಉತ್ತರ ಕರ್ನಾಟಕ ಉತ್ಸವ 2023″ ಯನ್ನು ಬೆಂಗಳೂರಿನ ಅರಮನೆ ಮೈದಾನದ ಶೀಶ್ ಮಹಾಲ್ ಪ್ಯಾಲೇಸ್ ಗೇಟ್ ನಂಬರ್ 7 ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಉತ್ತರ ಕರ್ನಾಟಕ ಬಾಗದಿಂದ ವಿವಿಧ ಉದ್ಯೋಗ ಅರಸಿ ಬಂದು ಬೆಂಗಳೂರು ಮಹಾ ನಗರದಲ್ಲಿ ನೆಲೆಸಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿ ಕೊಂಡು ಹೋಗಲು ವಿವಿಧ ಬಡಾವಣೆಯಲ್ಲಿ ಸಂಘಗಳನ್ನು ಕಟ್ಟಿಕೊಂಡಿದ್ದು, ಈ ಎಲ್ಲಾ ಸಂಸ್ಥೆಗಳು ಸೇರಿ ‘ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ‘ ಯನ್ನು ಕಟ್ಟಿಕೊಂಡು ಮತ್ತಷ್ಟು ಸಂಘಟಿತರಾಗಿದ್ದೇವೆ. ನಾವು ನಮ್ಮವರಿಗಾಗಿ ಕೈ ಜೋಡಿಸುತ್ತಾ ಎಲ್ಲರನ್ನು ಒಂದೆಡೆ ಸೇರಲು ಮತ್ತು ಬೆಳೆಯಲು ಒಬ್ಬರಿಗೊಬ್ಬರು ಮೆಟ್ಟಿಲಾಗಲು ಹಾಗೂ ನಮ್ಮ ಸಂಸ್ಕೃತಿ ಪರಂಪರೆಯನ್ನು ಮುಂದುವರೆಸಲು ‘ಉತ್ತರ ಕರ್ನಾಟಕ ಉತ್ಸವ 23’ ರನ್ನು ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಾಲ್ ಪ್ಯಾಲೇಸ್ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ ಪರಂಪರೆ, ಉಡುಗೆ ತೊಡಿಗೆ ಆಹಾರ ಪದ್ಧತಿ ಎಲ್ಲವನ್ನು ಅನಾವರಣ ಗೊಳಿಸಲು 2023 ಜನೆವರಿ 21 ಮತ್ತು 22 ಶನಿವಾರ ಭಾನುವಾರ ಎರಡು ದಿನಾ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.
Join The Telegram | Join The WhatsApp |