Join The Telegram | Join The WhatsApp |
ದೇಹದ ತೂಕವನ್ನು ಇಳಿಸುವಂತಹ ಅನೇಕ ಆಹಾರಗಳಿವೆ. ಅವುಗಳಲ್ಲಿ cಕೂಡ ಒಂದು. ಅಣಬೆ ಯನ್ನು ಈಗಾಗಲೇ ಅನೇಕ ಮಂದಿ ತಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಶಿಲೀಂಧ್ರವಾಗಿರುವ ಅಣಬೆಯನ್ನು ಎಲ್ಲ ತರಕಾರಿಗಳಂತೆಯೇ ಬಳಸಲಾಗುತ್ತದೆ. ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಇದರಿಂದ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅಣಬೆಯಿಂದ ನಾನಾ ತಿಂಡಿ, ಸ್ನ್ಯಾಕ್ಸ್ ನಂತಹ ಆಹಾರಗಳನ್ನು ಕೂಡ ತಯಾರಿಸಬಹುದಾಗಿದೆ. ಬೇರೆ ತರಕಾರಿಗಳೊಡನೆ ಕೂಡ ಇದನ್ನು ಸೇರಿಸಿ ಅಡುಗೆ ಮಾಡಲಾಗುತ್ತದೆ. ಹಾಗಂತ ಎಲ್ಲ ಅಣಬೆಗಳು ಸೇವಿಸಲು ಯೋಗ್ಯವಾಗಿರುವುದಿಲ್ಲ. ಅವುಗಳಲ್ಲಿ ಕೆಲವೇ ಪ್ರಭೇದದ ಅಣಬೆಗಳು ಮಾತ್ರ ಸೇವಿಸಲು ಯೋಗ್ಯವಾಗಿರುತ್ತದೆ.
ತಲೆನೋವಿಗೆ ಕ್ಷಣದಲ್ಲಿ ಉಪಶಮನ ಅಂತಾ ಮಾತ್ರೆ ನುಂಗೋದು ಸರೀನಾ?
ಅಣಬೆಗಳು ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತವೆ. ಇದು ವಿವಿಧ ಆಕಾರದಲ್ಲಿ ಮತ್ತು ಬಣ್ಣಗಳಲ್ಲಿ ದೊರೆಯುತ್ತದೆ. ಅಣಬೆ ಬಿ ಜೀವಸತ್ವವನ್ನು ಹೊಂದಿದ್ದು, ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಇದು ಪ್ರೋಟೀನ್, ಎಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳ ಆಗರವಾಗಿದೆ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯದ ಸಮಸ್ಯೆಗೆ ಇದು ರಾಮಬಾಣವಾಗಿದೆ. ಆಧುನಿಕ ಆಹಾರ ಪದ್ಧತಿಯಿಂದ ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಹೊರಹಾಕುವ ಕೆಲಸ ಇದು ಮಾಡುತ್ತದೆ.
ಅಣಬೆಯಿಂದ ಶರೀರಕ್ಕಾಗುವ ಪ್ರಯೋಜನಗಳಿವು :
ಅಣಬೆಯಲ್ಲಿದೆ ಹೆಚ್ಚಿನ ಫೈಬರ್ : ಅಣಬೆಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವುದರಿಂದ ಇದನ್ನು ತಿಂದಾಗ ಬೇಗನೆ ಹಸಿವಾಗುವುದಿಲ್ಲ. ಹಸಿವಾಗದೇ ಇದ್ದಾಗ ನಾವು ಸೇವಿಸುವ ಆಹಾರದ ಪ್ರಮಾಣವೂ ಕಡಿಮೆಯಾಗುತ್ತದೆ. ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
ಈ ಐದು ಸಂದರ್ಭಗಳಲ್ಲಿ ತೂಕ ನೋಡ್ಬೇಡಿ!
ಕಡಿಮೆ ಕ್ಯಾಲೊರಿ ಮತ್ತು ಕೊಬ್ಬು : ಕೊಬ್ಬಿನ ಪ್ರಮಾಣವನ್ನು ಕಡಿಮೆ ಹೊಂದಿರುವ ಮತ್ತು ಕಡಿಮೆ ಕ್ಯಾಲೊರಿಯುಳ್ಳ ಅಣಬೆ ಬೊಜ್ಜಿನ ಸಮಸ್ಯೆ ಹೊಂದಿರುವವರಿಗೆ ಒಳ್ಳೆಯ ಆಹಾರವಾಗಿದೆ.
ಕರುಳಿನ ಆರೋಗ್ಯಕ್ಕೆ ಒಳ್ಳೆಯದು : ಕರುಳಿನ ಆರೋಗ್ಯಕ್ಕೆ ಅಣಬೆ ಉತ್ತಮ ಆಹಾರವಾಗಿದೆ. ಕರುಳಿನ ಆರೋಗ್ಯ ಚೆನ್ನಾಗಿದ್ದರೆ ಅದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಮತ್ತು ತೂಕ ಕೂಡ ಇಳಿಯತ್ತದೆ.
Join The Telegram | Join The WhatsApp |