Ad imageAd image

ಐ ಮಸ್ಕ್ ಲೈಟ್ ಅಳವಡಿಕೆಗೆ ಮತ್ತು ದರ್ಗಾ ಮಸೀದಿಗೆ ಭೂಮಿ ಪೂಜೆ ನೆರವೇರಿಸಿದ ಎನ್ ವೈ ಗೋಪಾಲಕೃಷ್ಣ

Bharath Vaibhav
ಐ ಮಸ್ಕ್ ಲೈಟ್ ಅಳವಡಿಕೆಗೆ ಮತ್ತು ದರ್ಗಾ ಮಸೀದಿಗೆ ಭೂಮಿ ಪೂಜೆ ನೆರವೇರಿಸಿದ ಎನ್ ವೈ ಗೋಪಾಲಕೃಷ್ಣ
WhatsApp Group Join Now
Telegram Group Join Now

————————–ಪಟ್ಟಣದ ಕೆಇಬಿ ಸರ್ಕಲ್ ನಲ್ಲಿರುವ ಈದ್ಗಾ ಆವರಣದಲ್ಲಿ ಕಾರ್ಯಕ್ರಮ       

ಮೊಳಕಾಲ್ಮೂರು : ನಾನು ಮತ್ತು ನನ್ನ ಅಣ್ಣನವರು ಮುಸ್ಲಿಂ ಜನಾಂಗಕ್ಕೆ ಕಳೆದ ಕೆಲವು ವರ್ಷಗಳಿಂದ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದೇವೆ ನಾನು ಈ ಜನಾಂಗದ ಮಧ್ಯದಲ್ಲಿ ಬೆಳೆಯುತ್ತಾ ಬಂದಿದ್ದೇನೆ ಎಂದು ತಿಳಿಸಿದರು ಪಟ್ಟಣದಲ್ಲಿ ಸೋಮವಾರ ಕೆಇಬಿ ಸರ್ಕಲ್ ನಲ್ಲಿರುವ ಈದ್ಗಾ ಮೈದಾನದ ಐ ಮಸ್ಕ್ ಲೈಟ್ ಅಳವಡಿಕೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾನು ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಾಗಿದ್ದಾಗ ಅಲ್ಲಿನ ಮುಸ್ಲಿಂ ಬಾಂಧವರು ನನ್ನ ಬಳಿ ಬಂದು ನೀವು ನಮ್ಮ ಊರಿನವರು ಬಿಜೆಪಿ ಬಿಜೆಪಿ ಶಾಸಕರಾಗಿ ನಮ್ಮನ್ನು ನಿಮ್ಮಟ್ಟಿಗೆ ತೆಗೆದುಕೊಂಡು ಹೋಗಿ ನಮ್ಮ ಸಹಕಾರ ಇರುತ್ತದೆ ಎಂದು ಭಯಭೀತರಾಗಿ ಅವರು ನಮ್ಮ ಬಳಿ ಬಂದು ಅವರ ಕಷ್ಟಗಳನ್ನು ಹೇಳಿಕೊಂಡರು.

ನಾನು ಅವರಿಗೆ ಭರವಸೆ ನೀಡಿದೆ ನಾನು ಯಾವುದೇ ಪಕ್ಷದಿಂದ ಬಂದರೂ ಅದು ಎಲೆಕ್ಷನ್ ಗೆ ಮಾತ್ರ ಸೀಮಿತ ಒಂದು ವೇಳೆ ಮುಸ್ಲಿಂ ಜನಾಂಗಕ್ಕೆ ತೊಂದರೆ ಆದರೆ, ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಅವರಿಗೆ ಭರವಸೆ ನೀಡಿದೆ ನೀವು ಯಾವುದೇ ಕಾರ್ಯಕ್ರಮಗಳು ಇರಲಿ ನಿಮ್ಮ ಬೆನ್ನ ಹಿಂದೆ ನಾನು ಇರುತ್ತೇನೆ ಎಂದು ಭರವಸೆ ನೀಡಿದೆ.

ಅದೇ ರೀತಿ 1994 ಮತ್ತು 97 ರ ಉಪಚುನಾವಣೆಯ ಸಂದರ್ಭದಲ್ಲಿ ಇಡೀ ಕ್ಷೇತ್ರದ ಮೊಳಕಾಲ್ಮೂರು ರಾಂಪುರ ನಾಯಕನಹಟ್ಟಿ ತಳಕು ಮುಸ್ಲಿಂ ಜನಾಂಗ ಮತ್ತು ಇತರೆ ಜನಾಂಗ ನನ್ನ ಬೆನ್ನಿಗೆ ನಿಂತು ನನ್ನನ್ನು ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ಆದರಿಂದ ನಿಮ್ಮ ಋಣ ನಾನು ತೀರಿಸುತ್ತೇನೆ. ಈ ಮಸೀದಿಗೆ ನನ್ನ ವೈಯಕ್ತಿಕವಾಗಿ 5 ಲಕ್ಷ ನೀಡುತ್ತೇನೆ ಎಂದರು 2003ರ ಎಲೆಕ್ಷನ್ ನಲ್ಲಿ ಬಳ್ಳಾರಿಯ ಕೋಲ್ ಬಜಾರ್ ನಲ್ಲಿರುವ ಎಲ್ಲಾ ಮುಸ್ಲಿಮರು ನನ್ನ ಬೆನ್ನು ಹಿಂದೆ ನಿಂತು ನನ್ನನ್ನು ಗೆಲ್ಲಿಸುವ ಕೆಲಸ ಮಾಡಿದ್ದರು. ಆದ್ದರಿಂದ ನಿಮ್ಮ ನಮ್ಮ ಸಂಬಂಧ ಯಾವಾಗಲೂ ಗಟ್ಟಿಯಾಗಿರುತ್ತದೆ.

ಇದೇ ಸಂದರ್ಭದಲ್ಲಿ ಮಾಜಿ ವಕ್ ಬೋರ್ಡ್ ಅಧ್ಯಕ್ಷರಾದ ಅನ್ವರ್ ಭಾಷಾ ಮಾತನಾಡಿ ಇಲ್ಲಿ ಮಸೀದಿ ಆಗುತ್ತಿರುವುದು 40ವರ್ಷಗಳ ಕನಸು ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿ ಏಳು ಬಾರಿ ಶಾಸಕರಾಗಿರುವ ಎನ್ ವೈ ಗೋಪಾಲಕೃಷ್ಣ ಅವರ ಕೊಡುಗೆ ಕ್ಷೇತ್ರಕ್ಕೂ ಮತ್ತು ನಮಗೆ ಅಪಾರವಾದುದು. ಈ ಮಸೀದಿಗೆ ಬಹಳ ಹಿರಿಯರು ತುಂಬಾ ಶ್ರಮಪಟ್ಟಿದ್ದಾರೆ. ಇಲ್ಲಿನ ಅನೇಕರು ಇಲ್ಲಿ ಮಸೀದಿ ನಿರ್ಮಾಣಕ್ಕೆ ಪಣತೊಟ್ಟಿದ್ದರು.

ಅಂತಹ ಹಿರಿಯ ಜೀವಿಗಳಿಗೆ ಎಲ್ಲರಿಗೂ ಅಭಿನಂದನೆಗಳು ತಿಳಿಸಲು ಬಯಸುತ್ತೇನೆ. ಈ ದರ್ಗಕ್ಕೆ ನಾನು ಕಳೆದ ಬಾರಿ ಅಧ್ಯಕ್ಷನಾಗಿದ್ದಾಗ ಅನುದಾನವನ್ನು ನೀಡಿದ್ದೇನೆ ಅದೇ ರೀತಿ ನನ್ನ ವಯಕ್ತಿಕವಾಗಿ ಎರಡು ಲೋಡ್ ಸೀಮೆಂಟನ್ನು ನೀಡುತ್ತೇನೆ ಎಂದರು. ಅದೇ ರೀತಿ ನಮ್ಮ ವಕ್ತ್ ಸಚಿವರಾದ ಬಿ ಝೆಡ್ ಜಮೀರ್ ಅಹಮದ್ ಅವರಿಂದ 20 ಲಕ್ಷ ಹಣವನ್ನು ನೀಡಲು ಅವರಿಗೆ ಕೇಳಿಕೊಳ್ಳುತ್ತೇನೆ.ಅದೇ ರೀತಿ ಶಾಸಕರು ಲೆಟರ್ ಬರೆಯುವುದರ ಮೂಲಕ ಈ ಮಸೀದಿಗೆ ಹಣ ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಗುತ್ತಿಗೆದಾರರಾದ ಎಸ್ ಖಾದರ್. ಎಸ್ ಆರ್ ಎಂ ಎಸ್ ಮಾಲೀಕರಾದ ಮಹಮ್ಮದ್ ವಸಿ ಉಲ್ಲ, ಎಸ್ ಆರ್ ಜೆ ಬಸ್ ಮಾಲೀಕರಾದ ಸೈಯದ್ ದಸ್ತಗಿರಿ ಭರತ್ ಗ್ಯಾಸ್ ಮಾಲೀಕರಾದ ಮೊಹಮ್ಮದ್ , ಇ ಓ ಹನುಮಂತಪ್ಪ, ಅನೇಕ ಮುಸ್ಲಿಂ ಬಾಂಧವರು ಇನ್ನು ಹಲವರು ಉಪಸ್ಥಿತರಿದ್ದರು.

ವರದಿ: ಪಿ.ಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!