Join The Telegram | Join The WhatsApp |
ವರದಿ : ಅಜಿತ ಮಾದರ
ಚಿತ್ರದುರ್ಗ : ಒಳಮೀಸಲಾತಿ ವಿಚಾರವಾಗಿ ಇಂದು ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಮುಖಂಡರ ಜಾಗೃತ ಸಭೆಯನ್ನು ಚಿತ್ರದುರ್ಗದ ಶ್ರೀ ಶಿವಶರಣ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಈ ಜಾಗೃತ ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಮಹಾ ಸ್ವಾಮಿಗಳು ಮಾತನಾಡಿ, ನಮ್ಮ ಸಮುದಾಯದ ನಿರಂತರವಾಗಿ ಮೂರು ದಶಕಗಳಿಂದ ನ್ಯಾ. ಎ ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕೆಂದು ಹೋರಾಟ ಮಾಡುತ್ತ ಬಂದಿದ್ದು, ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ.
ಇನ್ನೂ ಒಂದು ತಿಂಗಳಲ್ಲಿ ಕೇಂದ್ರಕ್ಕೆ ಶಿಪಾರಸ್ಸು ಮಾಡುತ್ತಾರೆಂದು ಒಂದು ವೇಳೆ ಆಯೋಗದ ವರದಿಯನ್ನು ಕೇಂದ್ರಕ್ಕೆ ಕಳಸದೆ ಹೋದದಲ್ಲಿ ಮುಂದಿನ ದಿನಗಳಲ್ಲಿ ನಾವೆಲ್ಲ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡುವುದ್ದಾಗಿ ಹೇಳಿದರು.
ಈ ಸಭೆಗೆ ಶ್ರೀ ಶ್ರೀ ಷಡಕ್ಷರಿ ಮುನಿದೇಶಿ ಕೇಂದ್ರ ಸ್ವಾಮಿಗಳು,(ಆದಿ ಜಾಂಭವ ಗುರು ಪೀಠ ಹಿರಿಯೂರು), ಶ್ರೀ ಶ್ರೀ ಪೂರ್ಣಾನಂದ ಮಹಾಸ್ವಾಮಿಗಳು (ಮಾತಂಗ ಮಹರ್ಷಿ ಸೇವಾಶ್ರಮ ಹಂಪಿ), ಶ್ರೀ ಶ್ರೀ ಮಹಾ ಶಿವಶರಣ ಬಸವ ಹರಳಯ್ಯ ಸ್ವಾಮಿಗಳು ( ಹರಳಯ್ಯ ಗುರುಪೀಠ ಐಮಂಗಲ), ಶ್ರೀ ಮುಳೆಯಯ್ಯ ಸ್ವಾಮಿಗಳು (ಮರುಳ ಸಿದ್ದೇಶ್ವರ ಮಠ ಕೊಪ್ಪಳ) ಶ್ರೀ ಮರಳ ಸಿದ್ದೇಶ್ವರ ಮಹಾಸ್ವಾಮಿಗಳು ( ಸವಡಿ ಗದಗ) ಶ್ರೀ ಶಿವಮೂರ್ತಿ ಶಿವ ಶರಣ ಹರಳಯ್ಯ ಮಠ (ಪಿರಿಯಾಪಟ್ಟಣ ಮೈಸೂರು) ಶ್ರೀ ಶಿವಮುನಿ ಸ್ವಾಮಿಗಳು ಗುರು ಮರಳ ಸಿದ್ದೇಶ್ವರ ಪ್ರಭುದೇವರ ಮಹಾಮುನಿ ಮಠ ಗದಗ) ಶ್ರೀ ಓಂಕಾರ ಮುನಿ ಸ್ವಾಮಿಗಳು ಕೊಂಕಾಲು (ಆದಿಜಾಂಭವ ಮಠ ಮಧುಗಿರಿ) ಶ್ರೀ ರಮಾನಂದ ಸ್ವಾಮಿಗಳು (ಕುಕ್ಕನೂರ ರಾಜುರ ಮಠ ಕೊಫ್ಫಳ) ಶ್ರೀ ಮಾತಾ ಶ್ರೀ ದಯಾಭಾರತಿ ಅಮ್ಮನವರು ಬದಾಮಿ ಶ್ರೀ ಶರಣಮ್ಮ ತಾಯಿಯವರು (ಮಾದಾರ ಚನ್ನಯ್ಯ ಮಠ) ಈ ಎಲ್ಲ ಸ್ವಾಮಿಗಳ ನೇತೃತ್ವದಲ್ಲಿ ಸಭೆಗೆ ಸಮುದಾಯದ ಹಿರಿಯ ಮುಖಂಡರಾದ ಮಾರಸಂದ್ರ ಮುನಿಯಪ್ಪಾ, ಪಾವಗಡ ಶ್ರೀರಾಮ, ಡಾ.ಎನ್ ಪ್ರಾಶಾಂತರಾವ ಐಹೊಳೆ ಯುವ ಹೋರಾಟಗಾರರಾ ಅಜಿತ ಮಾದರ, ಮಾರುತಿ ಕೇಳಗೆರಿ ಇನ್ನೂ ರಾಜ್ಯದ ನೂರಾರು ಹೋರಾಟಗಾರರು, ಚಿಂತಕರು, ಹಿರಿಯ-ಕಿರಿಯ ಮುಖಂಡರು ಉಪಸ್ಥಿತರಿದ್ದರು.
Join The Telegram | Join The WhatsApp |