Join The Telegram | Join The WhatsApp |
ವರದಿ : ತುಕಾರಾಮ ಪವಾರ ಇಂಡಿ
ಇಂಡಿ: ಸರ್ಕಾರದ ಕೆಲಸ, ದೇವರ ಕೆಲಸ ಇದು ಶಕ್ತಿ ಸೌಧ ವಿಧಾನಸೌಧದ ಮುಂದೆ ಹಾಕಿರುವ ಘೋಷ ವಾಕ್ಯ ಆದರೆ ಸರ್ಕಾರದ ಕೆಲಸ ದೇವರ ಕೆಲಸವಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಈ ಗ್ರಾಮ ಪಂಚಾಯತಿ ಅಧಿಕಾರಿಗಳು
ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತ ಕಚೇರಿ ಬೆಳಿಗ್ಗೆ 11 ಗಂಟೆಯಾದರೂ ತಗೆಯದೆ ಇರುವುದು ವಿಪರ್ಯಾಸ ಸಂಗತಿ
ಇಲ್ಲಿನ ನೌಕರರು ಆಫೀಸ್ ಗೆ ಬಂದರೆ ಬರುತ್ತಾರೆ, ಇಲ್ಲ ಅಂದರೆ ಇಲ್ಲ. ಹೀಗೆ ಕಳ್ಳಾಟವಾಡಿಕೊಂಡು ತಿಂಗಳಾಯಿತು ಅಂದರೆ ಕೈ ತುಂಬ ಸಂಬಂಳ ಜೇಬಿಗಿಳಿಸಿಕೊಳ್ಳುತ್ತಾರೆ. ಇವರಿಗೆ ಹೇಳುವರು, ಕೇಳುವರು ಯಾರೂ ಇಲ್ಲದಂತಾಗಿದೆ.
ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಅಭಿವೃದ್ಧಿ ಅಧಿಕಾರಿಗಳು ,ಕಾರ್ಯದರ್ಶಿ, ಬಿಲ್ ಕಲೆಕ್ಟರ, ಕಂಪ್ಯೂಟರ್ ಆಪರೇಟರ್ ಯಾವ ಒಬ್ಬ ಸಿಬ್ಬಂದಿ ಕೂಡ ಬೆಳಿಗ್ಗೆ 11 ಗಂಟೆಯಾದರೂ ನಮ್ಮ ಕೈಗೆ ಸಿಕ್ಕಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.
ದಿನ ನಿತ್ಯದ ಗೋಳಿನಿಂದ ಜನರು ರೋಸಿ ಹೋಗಿದ್ದಾರೆ. ಈಗಲಾದರೂ ಸಂಬಂಧ ಪಟ್ಟ ಮೇಲಾಧಿಕಾರಿಗಳು ಇವರಿಗೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಕ್ರಮ ಕೈಗೊಳ್ಳುತ್ತಾರೆಯೆ ಎಂದು ಕಾದು ನೋಡೋಣ.
Join The Telegram | Join The WhatsApp |