ರಾಯಚೂರು:- ಸೋಮವಾರ, ಸಂಜೆ ಮಡಿವಾಳ ಸಮುದಾಯ ಭವನ ರಾಯಚೂರಿನಲ್ಲಿ “ನಿಜ ಶ್ರಾವಣ ಮಾಸದಲ್ಲಿ ಆಧ್ಯಾತ್ಮಿಕ ಚಿಂತನೆ ಎಂಬ ವಿಶೇಷ ಉಪನ್ಯಾಸ” ಮಾಲಿಕೆ ಭಾಗವಾಗಿ,ಉಪನ್ಯಾಸ ಕಾರ್ಯಕ್ರಮ ಜರುಗಿತು…*
ಮೊದಲಿಗೆ ಪೂಜ್ಯರಿಂದ ಹಾಗು ಶರಣರಿಂದ ಶ್ರೀ ಮಾಚಿದೇವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು
ಶ್ರೀ 108 ಸಾವಿರ ದೇವರು,
ಷ||ಬ್ರ|| ಶಾಂತಮಲ್ಲ ಶಿವಚಾರ್ಯ ಸ್ವಾಮಿಗಳು,
108 ಸಾವಿರ ದೇವರ ಸಂಸ್ಥಾನ,ಕಿಲ್ಲೇಬೃಹನ್ಮಠ, ರಾಯಚೂರು” ಇವರು ವಹಿಸಿ
*ವಿಶೇಷ ಆಶೀರ್ವಚನ ನೀಡದರು.
ಪೂಜ್ಯಶ್ರೀ ಹನುಮಂತಪ್ಪ ಗುರುಗಳು,ಮಂತ್ರಾಲಯ. ಅಧ್ಯಕ್ಷರು,ಶ್ರೀ ಶಂಕರಾಚಾರ್ಯ ಮಠ,ಹೀರಾಪೂರ ಇವರು ಮುಖ್ಯ ಉಪನ್ಯಾಸಕರಾಗಿ ಆಗಮಿಸಿ, ಕಾರ್ಯಕ್ರಮದ ಬಗ್ಗೆ ಉಪನ್ಯಾಸ ನೀಡುತ್ತಾ, ಮಾಚಿದೇವರ ವಚನಗಳಲ್ಲಿನ ಉತ್ತಮ ಚಿಂತನೆ,ತತ್ವ ಅನುಸರಣೆ,ಕಾಯಕ ದಾಸೋಹ,ಸಾಮಾಜಿಕ ಸುಧಾರಣೆ,ಭಕ್ತಿ ಜ್ಞಾನ,ನೀರಾಡಂಬರ ಜೀವನ ಮುಂತಾದ ವಿಷಯಗಳ ಬಗ್ಗೆ ವಿವರಿಸುತ್ತಾ,ಬಸವಾದಿ ಶರಣರು ಆರಂಭಿಸಿದ ವಿಷಯಗಳ ವಚನ ಕ್ರಾಂತಿಯಲ್ಲಿ ಕಂಡು ಬರುವ ಎಲ್ಲ ಗುಣಗಳು ಸಹ ಮಡಿವಾಳ ಮಾಚಯ್ಯ ನವರ ವಚನಗಳಲ್ಲಿವೆ. ಆತ್ಮ ವಿಶ್ವಾಸ ಎದೆಗಾರಿಕೆ, ಜ್ಞಾನ, ಡಾಂಭಿಕತೆಯ ನಿರಾಕರಣೆ, ಕೀಳು ದೈವದ ಖಂಡನೆ, ಶಿವ ಭಕ್ತಿಯ ಶ್ರೇಷ್ಠತೆ ಮಹತ್ವದ ಸ್ಥಾನ ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಶಾಂತಮಲ್ಲ ಶಿವಚಾರ್ಯ ಸ್ವಾಮಿಗಳು, ಶ್ರೀ ಹನುಮಂತಪ್ಪ ಮಂತ್ರಾಲಯ ಹಾಗು ಶ್ರೀ ನರಸಪ್ಪ ಯಕ್ಲಾಸಪೂರ್ ರವರಿಗೆ ಸಮಜದ ವತಿಯಿಂದ ಸನ್ಮಾನಿಸಲಾಯಿತು.
*ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಆಶಾಪುರ್ ತಂಡದಿಂದ ಸಂಗೀತ ಕಛೇರಿ ಪ್ರಸ್ತುತ ಪಡಿಸಿದರು
ಕಾರ್ಯಕ್ರಮವು ಶ್ರೀ ಪ್ರಭು ಏಗನೂರ್ ರವರಿಂದ ಶರಣು ಶರಣಾರ್ಥಿ ಎಂಬ ಶ್ಲೋಕದಿಂದ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ಬಂಧುಗಳು,ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಮಡಿವಾಳ ಸಮಾಜ ರಾಯಚೂರಿನ ಪಧಾದಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಹಿರಿಯ ಮುಖಂಡರು, ಮಹಿಳಾ ಘಟಕ ಪಧಾದಿಕಾರಿಗಳು ಹಾಗು ಸದಸ್ಯರುಗಳು ಉಪಸ್ಥಿತರಿದ್ದರು.
ವರದಿಗಾರರು:-ಗಾರಲದಿನ್ನಿ ವೀರನಗೌಡ