ಸೇಡಂ:- ತಾಲೂಕಿನ ಬೇನಕನ ಹಳ್ಳಿಯ ಶ್ರಿ ಮರಗಮ್ಮ ದೇವಿ ದೇವಸ್ಥಾನದಿಂದ ಚಂದನೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿ ಸಂಪೂರ್ಣ ಹದಿಗೆಟ್ಟಿದೆ.
ಇಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ನೀರು ರಸ್ತೆ ಮೇಲೆ ಬರುತ್ತಿವೆ. ನಡೆದಾಡಲು ಜನರಿಗೆ ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗಿರುತ್ತದೆ.
ಈ ವಿಷಯ ಬಗ್ಗೆ ಹಲವು ಬಾರಿ ಮನವಿ ಮಾಡಿದರು ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.
ಇಲ್ಲಿ ಅನೇಕ ವೃದ್ಧರು, ಶಾಲಾ ಮಕ್ಕಳು, ಸೇರಿದಂತೆ ಅನೇಕ ಜನರು ತುಂಬಾ ಸಮಯ ಕಾಲು ಜಾರಿ ಬಿದ್ದಿದ್ದಾರೆ ಇಲ್ಲಿ ನಡೆದಾಡುವ ಜನರಿಗೆ ನರಕಯಾತನೆಯಂತೆ ಆಗಿದೆ.
ಈ ಸಮಸ್ಯೆಗಳನ್ನು ಕೂಡಲೇ ಪರಿಶೀಲಿಸಿ ರಸ್ತೆಯನ್ನು ದುರಸ್ಥಿ ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ವತಿಯಿಂದ ಇಂದು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಕಾಕಲವಾರ, ಚನ್ನಬಸಪ್ಪ ಮಾಟ್ಗ, ಬಸಲಿಂಗಪ್ಪ ಎನ್ ಕಾಬ, ಅಯ್ಯಪ್ಪ ಮರಗಣ, ನರಸಪ್ಪ, ಸಂತು, ಬಸವರಾಜ್, ರೋವಿನ್ ಸೇರಿದಂತೆ ಇನ್ನಿತರರು ಇದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.