ಶಿವಮೊಗ್ಗ: ಒಂದೆಡೆ ಆಪರೇಶನ್ ಹಸ್ತ ಜೋರಾಗಿದ್ದರೇ, ಮತ್ತೊಂದೆಡೆ ಈಗ ಸದ್ಯದಲ್ಲೇ ಆಪರೇಶನ್ ಕಮಲ ಶುರುವಾಗುತ್ತೆ. ಬೇಕಿದ್ದರೇ ಕಾದು ನೋಡಿ ಎಂಬುದಾಗಿ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವರ ಯೋಗ್ಯತೆಗೆ ಆಪರೇಷನ್ ಹಸ್ತ, ಹಸ್ತ ಅಂತಾರೇ, ಬಿಜೆಪಿಯ ಒಬ್ಬನೇ ಒಬ್ಬ ಶಾಸಕರನ್ನು ಕರೆದೊಯ್ಯೋದಕ್ಕೆ ಆಗಲಿಲ್ಲ.
ಸುಖಾ ಸುಮ್ಮನೆ ಬಿಜೆಪಿಯವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬುದಾಗಿ ಅಪಪ್ರಚಾರ ಮಾಡ್ತಿದ್ದಾರೆ ಅಂದರು.
ಲೋಕಸಭೆ ಚುನಾವಣೆಗೂ ಮುನ್ನಾ ಅಥವಾ ನಂತ್ರ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪಥನವಾಗಲಿದೆ ಎಂದು ಹೇಳಿದ ಅವರು, ಬಿಜೆಪಿಯಿಂದ ಒಬ್ಬ ಶಾಸಕನನ್ನು ನೀವು ತಾಕತ್ತಿದ್ದರೇ ಕರೆದೊಯ್ಯಿರಿ ನೋಡೋಣ ಎಂಬುದಾಗಿ ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದರು.
ಮತ್ತೆ ಆಪರೇಷನ್ ಕಮಲ ಶುರುವಾಗಲಿದೆ. ಬೇಕಿದ್ದರೇ ಕಾದು ನೋಡಿ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಕಾಂಗ್ರೆಸ್ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ವಾಪಾಸ್ ಸೇರಿಸಿಕೊಳ್ಳೋದಿಲ್ಲ ಅಂತ ಸಿದ್ಧರಾಮಯ್ಯ ಹೇಳಿದ್ದರು.
ಈಗ ಇದೇ ಕಾಂಗ್ರೆಸ್ ಅವರನ್ನು ಏಕೆ ಬಿಜೆಪಿ ಶಾಸಕರ ಮನೆ ಕಾಯುತ್ತಿದ್ದಾರೆ.? ನೋಡ್ತಾ ಇರಿ. ಆಪರೇಷನ್ ಕಮಲ ಶುರುವಾಗಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕಾದು ನೋಡಿ ಎಂಬುದಾಗಿ ತಿಳಿಸಿದರು.