Join The Telegram | Join The WhatsApp |
ಇಳಕಲ್: ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಂದು ಹ್ಯಾಂಡಲ್ ಇಲ್ಲದೆ ಇಳಕಲ್ ಬೈಕ್ ಸಾಹಸಿ ವೀರಣ್ಣ ಕುಂದರಗಿ ಮಠ ಬೈಕ್ ನಡೆಸುವ ಮೂಲಕ ಬೈಕ್ ಸಾಹಸಕ್ಕೆ ಮುಂದಾಗಿದ್ದಾರೆ.
ಬೆಳಗ್ಗೆ ಬಾಗಲಕೋಟೆ ಜಿಲ್ಲಾ ಆಡಳಿತ ಭವನದಿಂದ ಬೈಕ್ ರ್ಯಾಲಿ ಆರಂಭಿಸಿದ ಬೈಕ್ ಸಾಹಸಿಗೆ ಇಲ್ಕಲ್ ನಗರಕ್ಕೆ ಆಗಮಿಸಿದಾಗ ಇಳಕಲ್ ನಗರದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜನಪದ ಸಾಹಿತ್ಯ ವತಿಯಿಂದ, ಗೆಳೆಯರ ಬಳಗದ ವತಿಯಿಂದ ಹಾಗೂ ಅವರ ಕುಟುಂಬ ವರ್ಗದವರಿಂದ ಮತ್ತು ಸಮಸ್ತ ಇಳಕಲ್ ಜನರು ಭವ್ಯ ಸ್ವಾಗತ ನೀಡಿದರು.
ಬೈಕ್ ಸಾಹಸದ ಕುರಿತು ವೀರಣ್ಣ ಅವರು ಮಾಧ್ಯಮದವರ ಜೊತೆ ಮಾತನಾಡುತ್ತಾ ಕನ್ನಡ ನಾಡು ನುಡಿ ಜಾಗೃತಿಗಾಗಿ ಹ್ಯಾಂಡಲ್ ಇಲ್ಲದೆ ಬಾಗಲಕೋಟೆಯಿಂದ ಹಾವೇರಿಯವರೆಗೂ ಬೈಕ್ ಸಾಹಸಕ್ಕೆ ಮುಂದಾಗಿದ್ದೇನೆ.
ಹ್ಯಾಂಡಲ್ ಇಲ್ಲದೆ ಕೈಕಾಲು ಕಟ್ಟಿಕೊಂಡು ಅನೇಕ ಬಾರಿ ಬೈಕ್ ಸಾಹಸ ಮಾಡುತ್ತಾ ಲಿಂಕಾ ದಾಖಲೆಯನ್ನು ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ಮಾಡಿದ್ದೇನೆ. ಶಾಸಕರ ಹಾಗೂ ಇಳಕಲ್ ಎಲ್ಲ ಜನರ ಸಹಕಾರ ಹಾಗೂ ನಾಡಿನ ಕನ್ನಡ ಅಭಿಮಾನಿಗಳ ಸಹಕಾರದಿಂದ ಈ ಸಾಹಸ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.
ವರದಿ. ದಾವಲ್. ಶೇಡಂ
Join The Telegram | Join The WhatsApp |