This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಬಿಸಿ ಊಟದಲ್ಲಿ ಹುಳುಗಳು ಪತ್ತೆ, ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಪಾಲಕರು ಆಕ್ರೋಶ

Join The Telegram Join The WhatsApp

ವಿಜಯಪುರ :  ಜಿಲ್ಲೆಯ ಮಿಂಚನಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ ಟಿ ಯಲ್ಲಿ ಮಧ್ಯಾಹ್ನ ಎಂದಿನಂತೆ ಮಕ್ಕಳು ಬಿಸಿಊಟ ಸೇವಿಸಿದ್ದಾರೆ. ಆದರೆ, ಕೆಲವು ಮಕ್ಕಳ ತಟ್ಟೆಯಲ್ಲಿ ಬೆಂದ ಅನ್ನದ ಜೊತೆ ಕುದ್ದು ಹೋದ ಹುಳುಗಳು ಪತ್ತೆಯಾಗಿವೆ. ಹುಳುಗಳು ತುಂಬಿದ್ದ ಬಿಸಿ ಊಟ ಸೇವಿಸಿದ ಮಕ್ಕಳು ಪೋಷಕರಲ್ಲಿ ಆತಂಕ ಶುರುವಾಗಿದೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಬಿಸಿ ಊಟ ತಯಾರಿಸುವ ಸಿಬ್ಬಂದಿಯ ನಿರ್ಲಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಬಿಸಿ ಊಟ ತಯಾರಿಕೆಗೂ ಮುನ್ನ ಅಕ್ಕಿ ಅನ್ನ ಮಾಡಲು ಯೋಗ್ಯವೇ ಎಂದು ಪರಿಶೀಲನೆ ಮಾಡಬೇಕು. ಅಲ್ಲದೆ, ಚೆನ್ನಾಗಿ ತೊಳೆದು ಅಕ್ಕಿಯನ್ನು ಶುಚಿಗೊಳಿ ನಂತರವೇ ಅಕ್ಕಿ ಬೇಯಲು ಇಡಬೇಕು. ಆದರೆ ಸಿಬ್ಬಂದಿಗಳು ಈ ಕೆಲಸ ಮಾಡದೆ ನೇರವಾಗಿ ಅಕ್ಕಿ ಬೇಯಿಸಿ ಅನ್ನ ಸಿದ್ಧಪಡಿಸಿದ್ದಾರೆ.

ಬಹಳ ದಿನಗಳ ಹಿಂದೆ ಬಂದ ಅಕ್ಕಿಯನ್ನು ಮೂಲೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಅದೇ ಅಕ್ಕಿ ನೇರವಾಗಿ ಅಡುಗೆ ಮಾಡಲು ಬಳಸಲಾಗಿದೆ.

ಹುಳಗಳೇ ತುಂಬಿದ್ದ ಹಳೆಯ ಅಕ್ಕಿಯನ್ನು ಬೇರ್ಪಡಿಸದೆ ನೇರವಾಗಿ ಅಡುಗೆ ಮಾಡಿರುವುದರಿಂದ ಅನ್ನದ ಜೊತೆಗೆ ಹುಳುಗಳು ಬೆಂದು ಹೋಗಿವೆ. ಅನ್ನದ ಜೊತೆ ಬೆಂದ ಹುಳುಗಳು ಈಗ ವಿದ್ಯಾರ್ಥಿಗಳ ಹೊಟ್ಟೆ ಸೇರಿದ್ದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ನಾಲ್ಕೈದು ಸಲ ತೊಳೆದರೂ ಕಣ್ಣು ತಪ್ಪಿ ಹುಳು ಬಂದಿರಬಹುದು ಇನ್ನೂ ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ಳುತ್ತೇವೆ – ಮುಖ್ಯ ಗುರುಗಳು ಸ.ಹಿ.ಪ್ರಾ.ಶಾಲೆ ಮಿಂಚನಾಳ


Join The Telegram Join The WhatsApp
Bharath Vaibhav
the authorBharath Vaibhav

Leave a Reply