Join The Telegram | Join The WhatsApp |
ಹರಪನಹಳ್ಳಿ: (ವಿಜನಯನಗರ ಜಿಲ್ಲೆ) :- ಶಾಸಕ ಜಿ.ಕರುಣಾಕರ ರೆಡ್ಡಿಯವರು ತಾಲ್ಲೂಕಿನ ಸಾಸ್ವಿಹಳ್ಳಿ ಹತ್ತಿರ ಇರುವ ಹಗರಿ ಹಳ್ಳಕ್ಕೆ ಭಾಗೀನ ಅರ್ಪಿಸಿದರು.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಕೆರೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ, ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮದ ಹತ್ತಿರ ಇರುವ ಹಗರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ನೋಡಲು ಮನಮೋಹಕವಾಗಿದೆ.
ಈ ವೇಳೆ ಬಿಜೆಪಿ ಮುಖಂಡ ಎಸ್.ಹೆಚ್ ಬಳ್ಳನಗೌಡ ಮಾತನಾಡಿ ಮಾಜಿ ಸಚಿವರು, ಜನಪ್ರಿಯ ಶಾಸಕರಾದ ಜಿ. ಕರುಣಾಕರ ರಡ್ಡಿಯವರು ನಮ್ಮ ಸಾಸ್ವಿಹಳ್ಳಿ ಗ್ರಾಮದ ಹತ್ತಿರ ಇರುವ ಹಗರಿ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿಸಿ ಈ ಭಾಗದ ಜನರಿಗೆ ಅನಕೂಲ ಮಾಡಿ ತಾಲ್ಲೂಕಿನ ಅಭಿವೃದ್ದಿ ಹರಿಕಾರರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಷ್ಣು ರೆಡ್ಡಿ, ಆರ್ ಲೋಕೇಶ್, ದಾದಪುರ ಶಿವಾನಂದ, ಎಂ.ಮಲ್ಲೇಶ್, ಎನ್ ಸೀರನಹಳ್ಳಿ ಪ್ರಕಾಶ್, ರೆಡ್ಡಿ ಸಿದ್ದೇಶ್, ಅನಂತನಳ್ಳಿ ಅಣ್ಣಪ್ಪ, ಶಾಸಕರ ಆಪ್ತ ಸಹಾಯಕ ಹೇಮಂತ್, ಸಾಸ್ವಿಹಳ್ಳಿ ಗ್ರಾಮದ ಮುಖಂಡರಾದ ಎಸ್.ಹೆಚ್ ಬುಳ್ಳನಗೌಡ, ಎಂ.ಪಿ ಹಾಲೇಶ್, ಡಾ. ಬಸವರಾಜ್, ಹೆಚ್ ಹಾಲೇಶ್, ಹೆಚ್.ಚನ್ನಬಸಪ್ಪ, ಎಂ. ಬಸವರಾಜ್, ಯು.ಚನ್ನಬಸಪ್ಪ, ಬಾರಿಕರ ಕೋಟೆಪ್ಪ ಸೇರಿದಂತೆ ಮತ್ತಿತರರು ಇದ್ದರು.
Join The Telegram | Join The WhatsApp |