Join The Telegram | Join The WhatsApp |
ಮುಂಬೈ : ಪಠಾಣ್’ ಸಿನಿಮಾದ ಕಲೆಕ್ಷನ್ ತಗ್ಗುವ ಲಕ್ಷಣ ಸದ್ಯಕ್ಕಂತೂ ಕಾಣುತ್ತಿಲ್ಲ. ಮೊದಲ ಐದು ದಿನ ಅಬ್ಬರದ ಕಲೆಕ್ಷನ್ ಮಾಡಿದ್ದ ಈ ಚಿತ್ರ ಸೋಮವಾರ (ಜನವರಿ 30) ಎಷ್ಟು ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು.
ಇದಕ್ಕೆ ಈಗ ಉತ್ತರ ಸಿಕ್ಕಿದೆ. ಸೋಮವಾರವೂ ಶಾರುಖ್ ಖಾನ್ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಈ ಮೂಲಕ ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಶಾರುಖ್ ಖಾನ್ ವೃತ್ತಿಜೀವನದಲ್ಲಿ ಈ ಚಿತ್ರ ತುಂಬಾನೇ ವಿಶೇಷ ಎನಿಸಿಕೊಳ್ಳಲಿದೆ.
ಯಾವುದೇ ಚಿತ್ರಕ್ಕೆ ಸೋಮವಾರದ ಕಲೆಕ್ಷನ್ ತುಂಬಾನೇ ಮುಖ್ಯವಾಗುತ್ತದೆ. ಮೊದಲ ವೀಕೆಂಡ್ನಲ್ಲಿ ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಾರೆ. ಆದರೆ, ಮೊದಲ ಸೋಮವಾರ ಚಿತ್ರವನ್ನು ಎಷ್ಟು ಜನರು ವೀಕ್ಷಿಸಿದರು? ಸಿನಿಮಾ ಎಷ್ಟು ಗಳಿಸಿತು ಎನ್ನುವುದರ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗುತ್ತದೆ.
‘ಪಠಾಣ್’ ಸಿನಿಮಾ ಸೋಮವಾರ ಸುಮಾರು 25 ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ ಭಾರತದಲ್ಲಿ ಈ ಚಿತ್ರದ ಹಿಂದಿ ವರ್ಷನ್ ಕಲೆಕ್ಷನ್ 296 ಕೋಟಿ ರೂಪಾಯಿ ಆಗಿದೆ. ಈ ವಾರಾಂತ್ಯಕ್ಕೆ ಚಿತ್ರ 400 ಕೋಟಿ ಕ್ಲಬ್ ಸೇರಲಿದೆ.
‘ಪಠಾಣ್’ ಸಿನಿಮಾ ಹಿಂದಿ ಮಾತ್ರವಲ್ಲದೆ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗಿದೆ. ಅದರ ಕಲೆಕ್ಷನ್ ಸೇರಿದರೆ ಭಾರತದ ಬಾಕ್ಸ್ ಆಫೀಸ್ ಗಳಿಕೆ 330 ಕೋಟಿ ರೂಪಾಯಿ ದಾಟಿದೆ. ವಿಶ್ವಾದ್ಯಂತ ಚಿತ್ರದ ಗಳಿಕೆ 600 ಕೋಟಿ ರೂಪಾಯಿ ಆಗಿದೆ. ಇನ್ನೂ ಕೆಲ ವಾರ ‘ಪಠಾಣ್’ ಸಿನಿಮಾ ಅಬ್ಬರದ ಗಳಿಕೆ ಮಾಡಲಿದೆ.
‘ಪಠಾಣ್’ ಚಿತ್ರ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರುವುದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ಈ ಕಾರಣಕ್ಕೆ ಸಿನಿಮಾ ತಂಡ ಸೋಮವಾರ ಸುದ್ದಿಗೋಷ್ಠಿ ನಡೆಸಿತ್ತು. ಈ ವೇಳೆ ಇಡೀ ತಂಡ ಎಲ್ಲರಿಗೂ ಧನ್ಯವಾದ ಅರ್ಪಿಸಿದೆ. ಶಾರುಖ್ ಖಾನ್ ಅವರು ಬೈಕಾಟ್ ವಿಚಾರವಾಗಿಯೂ ಮಾತನಾಡಿದ್ದಾರೆ. ಯಾರಿಗೂ ನೋಯಿಸುವ ಉದ್ದೇಶ ನಮ್ಮದಲ್ಲ ಎಂದು ಅವರು ಹೇಳಿದ್ದಾರೆ
Join The Telegram | Join The WhatsApp |