ಪಾವಗಡ: ತಾಲೂಕು ಗುತ್ತಿಗೆದಾರರ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘದ ದಿನದರ್ಶಿಕೆ ಬಿಡುಗಡೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಂಘದ ವತಿಯಿಂದ ಸನ್ಮಾನವನ್ನು ಪಾವಗಡ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯೆ ಎ.ಇ.ಇ. ಹನುಮಂತಪ್ಪನವರು ಹುದ್ದೆಯಿಂದ ಪದೋನ್ನತಿ ಹೊಂದಿ ಮಧುಗಿರಿ ಜಿಲ್ಲಾ ಪಂಚಾಯತ್ ವಿಭಾಗದ ಇ.ಇ. ಯಾಗಿ ವರ್ಗಾವಣೆಗೊಂಡಿರುವ ರವರು ಪಾವಗಡ ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿರುವುದಕ್ಕೆ ಹಾಗೂ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ ಅವರು ಪಾವಗಡ ತಾಲೂಕು ನಿರ್ದೇಶಕರಾಗಿ ಆಯ್ಕೆ ಆಗಿರುವುದಕ್ಕೆ ಮತ್ತು ಗುತ್ತಿಗೆದಾರರ ಸಂಘದ ಖಜಾಂಚಿ ಪಾಲನಾಯ್ಕ ನಾಗಲಮಡಿಕೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆ ಆಗಿರುವುದಕ್ಕೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಸಂಘದ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎನ್ ಅನಿಲ್ ಕುಮಾರ್ ಎ.ಇ.ಇ. ಲೋಕೋಪಯೋಗಿ ಇಲಾಖೆ ರವರು ಮಾತನಾಡಿ ಪಾವಗಡ ತಾಲೂಕಿನಲ್ಲಿ ಜೆ.ಜೆ.ಎಮ್. ಹಾಗೂ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಸಿ ತಾಲೂಕಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಪಾವಗಡ ವಿಭಾಗದ ಎ.ಇ.ಇ. ಸುರೇಶ್ ರವರು ಮಾತನಾಡಿ ಪಾವಗಡ ತಾಲೂಕಿಗೆ ಉತ್ತಮ ಸೇವೆ ಸಲ್ಲಿಸಿರುವ ಹನುಮಂತಪ್ಪ ಸಾರ್ ಅವರನ್ನು ಸೇವೆಯನ್ನು ಪ್ರಶಂಸಿಸಿದರು. ಹಾಗೂ ತಾಲೂಕಿನ ಅಭಿವೃದ್ಧಿಗೆ ತಾಲೂಕು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಚಂದ್ರಶೇಖರ್ ರೆಡ್ಡಿ ಅವರು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎ.ಇ.ಇ. ಶ್ರೀಮತಿ ಕಾವ್ಯ. ಇಂಜಿನಿಯರ್ ಗಳಾದ ಬಸವಲಿಂಗಪ್ಪ. ಅನಿಲ್ ಕುಮಾರ್. ವಾಣಿ.ನವೀನ್ ಕುಮಾರ್. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಶಂಕರ ರೆಡ್ಡಿ. ಉಪಾಧ್ಯಕ್ಷ ಗಂಗಪ್ಪ. ಪ್ರಧಾನ ಕಾರ್ಯದರ್ಶಿ. ಲೋಕೇಶ್ ಪಾಳೇಗಾರ್. ಕಾರ್ಯದರ್ಶಿ ತಿಮ್ಮಯ್ಯ ಖಜಾಂಚಿ ಪಾಲ ನಾಯ್ಕ. ನಿರ್ದೇಶಕರಾದ ದಿವಾಕರಪ್ಪ. ಬ್ರಹ್ಮಾನಂದ ರೆಡ್ಡಿ. ರಾಮಾಂಜನೇಯ. ರಮೇಶ್. ವಿಜಯ ಭಾಸ್ಕರ್ ನಾಯ್ಡು. ಮಾರಪ್ಪ. ಈರಾರೆಡ್ಡಿ. ಮಂಜುನಾಥ್. ಗುತ್ತಿಗೆದಾರರಾದ. ಸುಬ್ಬರಾಯಪ್ಪ. ಪೋತರೆಡ್ಡಿ. ಗಂಗಪ್ಪ. ವೆಂಕಟೇಶ್. ಸತೀಶ್ ರೆಡ್ಡಿ. ಮಂಜುನಾಥ್. ಆಡಿಟರ್ ಸಂತೋಷ್. ಪ್ರಭಾಕರ್.ಸೀನಾ ನಾಯ್ಕ ಮುಂತಾದವರು ಭಾಗವಹಿಸಿದ್ದರು.
ವರದಿ: ಶಿವಾನಂದ ಪಾವಗಡ