Join The Telegram | Join The WhatsApp |
ಚನ್ನಮ್ಮನ ಕಿತ್ತೂರ: ಗೃಹ ಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ ಬೇಕು ಆ ರೇಷನ್ ಕಾರ್ಡ್ ಏನ್ನಾದರು ತಿದ್ದುಪಡಿ ಮಾಡುವುದು ಇದ್ದರೆ ಆಹಾರ ಇಲಾಖೆ ಅಧಿಕಾರಿಗಳ ಕಡೆ ಹೊದರೆ ಸರ್ವರ್ ಇಲ್ಲ ಅಂತ ಹೇಳತ್ತಾರೆ. ಗ್ರಾಮೀಣ ಪ್ರದೇಶದ ಜನ ಆಹಾರ ಇಲಾಖೆ ಹೊಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿ ಅಂತ ಕೇಳಿದರೆ ಅಧಿಕಾರಿಗಳ ಕಡೆಯಿಂದ ಬರುವ ಒಂದೇ ಉತ್ತರ ಅದು ಸರ್ವರ್ ಇಲ್ಲ ಅಂತ. ಇದರಿಂದ ಆಹಾರ ಇಲಾಖೆ ಕಚೇರಿಗೆ ಜನ ಹೊಗಿಹೊಗಿ ಬೇಸತ್ತು ಹೊಗಿದ್ದಾರೆ ಇತ್ತ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವುದ್ದಕ್ಕೆ ಆಗದೆ ಇತ್ತ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವುದ್ದಕ್ಕ ಆಗದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದ್ದಕ್ಕೆ ತೊಂದರೆ ಆಗುತ್ತಿದ್ದು ಕೊಡಲೇ ಇದರ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಸಚಿವರು ಗಮನ ಹರಿಸಬೇಕು.
ಆಹಾರ ಇಲಾಖೆ ಸಚಿವರು ಎಲ್ಲಿ ಇದ್ದಿರ್ರಿ ಏನ್ನ ಮಾಡತ್ತಿರ್ರಿ ಸ್ವಲ್ಪ ಇತ್ತ ಗಮನ ಹರಿಸಿ. ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದ್ದಕ್ಕೆ ಅವಕಾಶ ಮಾಡಿಕೊಟ್ಟಿರ್ರಿ ಆದರೆ ಸರ್ವರ್ ಬರತ್ತಿಲ್ಲ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವ ಜನ ಆನ್ಲೈನ್ ಸೆಂಟರ್ ಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಿ ಪ್ರಾರಂಭ ಆಗಿದೆ ಅಂತ ಹೇಳತ್ತಿರ್ರಿ ಆದರೆ ಸರ್ವರ್ ಬರತ್ತಿಲ್ಲ ಜನ ಏನ್ನ ಮಾಡಬೇಕು. ಆಹಾರ ಇಲಾಖೆ ಸಚಿವರೇ ಹೇಳಿ. ಇನ್ನಾದರೂ ಆಹಾರ ಇಲಾಖೆ ಸಚಿವರು ಇದರ ಬಗ್ಗೆ ಗಮನ ಹರಿಸುತ್ತಾರ ಅಂತ ಕಾದುನೂಡೋಣ.
ವರದಿ: ಬಸವರಾಜ ಭೀಮರಾಣಿ. ಜಗದೀಶ ಕಡೋಲಿ
Join The Telegram | Join The WhatsApp |