Join The Telegram | Join The WhatsApp |
ಕಲಘಟಗಿ: ಹಳಿಯಾಳ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿಗೆ ಎಫ್ ಆರ್ ಪಿ ದರ ಆದಷ್ಟು ಬೇಗನೆ ನಿಗದಿ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ಮಾಡಲಾಗುವುದು ಎಂದು ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ ಹೇಳಿದರು.
ಅವರು ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದ ಹತ್ತಿರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿ ಕರೆದು ಮಾತನಾಡಿದರು.
ಅತಿವೃಷ್ಟಿ ಮಳೆಯಿಂದ ಗೋವಿನ ಜೋಳ, ಸೋಯಾಬಿನ ಬೆಳೆ ನೆಲ ಕಚ್ಚಿ ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ ಕಬ್ಬಿನ ಬೆಳೆ ಕೂಡಾ ಮಳೆಗೆ ಇಳುವರಿ ಕಡಿಮೆಯಾಗಿದ್ದು ಬೆಲೆ ಕೂಡಾ ಕಡಿಮೆ ಮಾಡಿದರೆ ರೈತರ ಮೇಲೆ ಗಾಯದ ಮೇಲೆ ಬರೇ ಎಳೆದಂತಾಗುತ್ತದೆ ಎಂದರು.
ಬೆಳಗಾವಿಯ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಎಫ್ ಆರ್ ಪಿ ದರ ನಿಗದಿ ಮಾಡಿದ್ದಾರೆ ಆದರೆ ಹಳಿಯಾಳ ಸಕ್ಕರೆ ಕಾರ್ಖಾನೆಯವರು ರೈತರಿಗೆ 2372 ರೂ ಮಾತ್ರ ನಿಗದಿ ಅನ್ಯಾಯವೇಸಗಿದೆ ಕೂಡಲೇ ಹಿಂದಿನ ವರ್ಷದ 2590 ರೂ ದರ ಆದರೂ ಘೋಷಣೆ ಮಾಡಿ ಕಬ್ಬು ಕಟಾವು ಮಾಡಲು ರೈತರಿಗೆ ಅನುಕೂಲ ಕಲ್ಪಿಸಿಕೊಡ ಬೇಕು ಎಂದು ಒತ್ತಾಯಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿಗಳು ಹಳಿಯಾಳ ಸಕ್ಕರೆ ಕಾರ್ಖಾನೆ ಮಾಲೀಕರ ತುರ್ತು ಸಭೆ ಕರೆದು ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಸೂಚನೆ ನೀಡಬೇಕು ಎಂದರು.
ನಿಗದಿತ ಸಮಯದಲ್ಲಿ
ಕನಿಷ್ಠ ಬೆಂಬಲ ಘೋಷಣೆ ಮಾಡದಿದ್ದರೆ ಕಲಘಟಗಿಯ ನೂರಾರು ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು.
ಬಿಜೆಪಿ ತಾಲ್ಲೂಕ ಅಧ್ಯಕ್ಷ ಬಸವರಾಜ ಶೇರೆವಾಡ, ಚಂದ್ರಗೌಡ ಪಾಟೀಲ,ಸುರೇಶ ಶೀಲವಂತರ, ಮಾತೇಶ ಹೆಂಬ್ಳಿ, ಸೋಮು ಕೊಪ್ಪದ, ಶಶಿಧರ ಹುಲಿಕಟ್ಟಿ ಇದ್ದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |