Join The Telegram | Join The WhatsApp |
ಹಾರೂಗೇರಿ: ವಿಶ್ವದಾದ್ಯಂತ ಇಂದು ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ ಕನಸಿನ ಕೂಸಾದ ಗಂಧದಗುಡಿ ಚಲನಚಿತ್ರ ಇಂದು ಬಿಡುಗಡೆಗೊಂಡಿತು. ಇದರ ಪ್ರಯುಕ್ತ ಹಾರೂಗೇರಿಯಲ್ಲಿ ಇಂದು ಅಪ್ಪು ಅವರ ಕಟೌಟಿಗೆ ಹೂವಿನ ಹಾರವನ್ನು, ಹಾಲಿನ ಅಭಿಷೇಕ, ಹಾಗೂ ಪಟಾಕಿಗಳನ್ನು ಸಿಡಿಸುವುದರ ಮುಖಾಂತರ ಗಂಧದಗುಡಿ ಚಲನಚಿತ್ರವನ್ನು, ಹಾರೂಗೇರಿಯ ಸಮಸ್ತ ಅಪ್ಪು ಅಭಿಮಾನಿಗಳು ಬರಮಾಡಿಕೊಂಡರು. ಚಲನಚಿತ್ರ ಪ್ರಾರಂಭಗೊಳ್ಳುವ ಮೊದಲೇ ಚಂದ್ರಮ ಚಿತ್ರಮಂದಿರದ ಮುಂದುಗಡೆ ಅಪಾರ ಜನಸ್ತೋಮ ನೆರೆದಿತ್ತು. ಅಪ್ಪು ಅವರ ಅಪ್ಪಟ ಅಭಿಮಾನಿ ಆದ ಸ್ಟಂಟ್ ಗೋಪಿ, ಅಪ್ಪು ಅವರ ಕಟೌಟಿಗೆ ತೆಂಗಿನ ಕಾಯಿ ಒಡೆಯುವುದರ ಮುಖಾಂತರ ವಿಶೇಷವಾಗಿ ಬರಮಾಡಿಕೊಂಡರು. ಅಭಿಮಾನಿಗಳ ನೆಚ್ಚಿನ ಆರಾಧ್ಯ ನಟರಾದ ಅಪ್ಪು ಅವರ ಚಲನ ಚಿತ್ರವನ್ನು ನೋಡಲು ಮೊದಲಿನಂತೆ ಕುಟುಂಬ ಸಮೇತವಾಗಿ ಬರುತ್ತಿದ್ದು ವಿಶೇಷವಾಗಿತ್ತು. ಎಲ್ಲೆಡೆ ಅಪ್ಪು ಅವರಿಗೆ ಜೈ, ಗಂಧದಗುಡಿಗೆ ಜೈ, ದೊಡ್ಮನೆಗೆ ಜೈ, ಎನ್ನುವ ಜೈಕಾರಗಳು ಕೇಳುತ್ತಿದ್ದವು.
ವರದಿ : ಅಪ್ಪಾಸಾಹೇಬ ಮಾದರ
Join The Telegram | Join The WhatsApp |