This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಅಭಿವೃದ್ಧಿ ಕೆಲಸಕ್ಕೆ ಜನರ ಸಹಕಾರ ಅಗತ್ಯ: ಹಾಲಪ್ಪ ಆಚಾರ

Join The Telegram Join The WhatsApp

ಕೊಪ್ಪಳ: ಸರ್ಕಾರದಿಂದ ಆಗುವ ಪ್ರತಿಯೊಂದು ಕಾಮಗಾರಿಗಳ ಅಚ್ಚುಕಟ್ಟಾಗಿ ಅಭಿವೃದ್ಧಿ ಹೊಂದ ಬೇಕಾದರೇ ಜನರ ಸಹಕಾರ ಮುಖ್ಯವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವ ಹಾಲಪ್ಪ ಆಚಾರ ಹೇಳಿದರು.

ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಾಗೂ ಸಿಬ್ಬಂದಿಗಳ ವಸತಿ ಗೃಹಗಳ‌ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಗುರುವಾರ ಮಾತನಾಡಿದರು. ಸಂಗನಹಾಲ ಗ್ರಾಮದ ಅನ್ನದಾತರು ಹಾಗೂ ಸಾರ್ವಜನಿಕರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 5.ಲಕ್ಷ ಅನುದಾನ ಮತ್ತು ಗ್ರಾಮಸ್ಥರ ವಂತಿಕೆ‌ ಹಣದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಕುಡಿಯುವ ನೀರಿ‌ನ ಕೆರೆ ಆಗಿದ್ದರಿಂದ ಗ್ರಾಮಸ್ಥರ ಬೇಡಿಕೆಯಂತೆ ಸಣ್ಣ ನೀರಾವರಿ ಇಲಾಖೆಯಿಂದ 59. ಲಕ್ಷ ವೆಚ್ಚದಲ್ಲಿ ಅದ್ಬುತ ಕೆರೆ ಮಾಡಿಕೊಂಡಂತೆ ಗ್ರಾಮದಲ್ಲಿ ನಡೆಯುವ ಪ್ರತಿ ಕಾಮಗಾರಿಗಳ ಬಗ್ಗೆ ಜಾಗೃತಿ ವಹಿಸಬೇಕು. 40 ವರ್ಷದ ಹಳೆಯ ಕಟ್ಟಡ ಇರುವುದರಿಂದ ಆರೋಗ್ಯ ಸೇವೆ ನೀಡಲು ತೀವ್ರ ತೊಂದರೆಯಾಗುತ್ತಿತ್ತು. ಆದ ಕಾರಣ ಹೊಸ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ತಮಗೆ ಸೇವೆ ಒದಗಿಸುವ ಕಟ್ಟಡದ ಕಾಮಗಾರಿಗಳನ್ನು ಸುಸಜ್ಜಿತವಾಗಿ ನಿರ್ಮಿಸಿಕೊಳ್ಳುವಂತೆ ಗಮನ ಹರಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಫರೀದಾಬೇಗಂ ನಧಾಪ್, ಉಪಾಧ್ಯಕ್ಷ ಬಸಮ್ಮ ಸದಸ್ಯರಾದ ಮಾಳಮ್ಮ ಕಟ್ಟೆಪ್ಪನವರ, ಈಶಪ್ಪ ಕೋಳೂರ, ದುರುಗಪ್ಪ ನಡುಲಕೇರಿ, ಗಿರಿಜಾ ಸಿದ್ದರೆಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಮಾ ಪಾಟೀಲ್, ಕೇಂದ್ರದ ಆರೋಗ್ಯ ಅಧಿಕಾರ ಡಾ.ಅಮರೇಶ ನಾಗರಾಳ, ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ಶರಣಪ್ಪ ಈಳಿಗೇರ, ಈಶಪ್ಪ ಆರೇರ, ಶಂಭು ಜೋಳದ, ಪಿಡಿಒ ಪ್ರಕಾಶ ಸಿಡ್ನಳ್ಳಿ ಇದ್ದರು‌.

ಶರಣಕುಮಾರ್ ಅಮರಗಟ್ಟಿ


Join The Telegram Join The WhatsApp
Bharath Vaibhav
the authorBharath Vaibhav

Leave a Reply