Join The Telegram | Join The WhatsApp |
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಕೇಳಿಬಂದಿರುವ ಗಂಭೀರ ಸ್ವರೂಪದ ಆರೋಪದ ಬಗ್ಗೆ ಶಾಸಕರು ಹಾಗೂ ಸಂಸದರು ಪ್ರತಿಕ್ರಿಯಿಸದೇ ಇರುವುದನ್ನು ಕಾದಂಬರಿಕಾರ ಬಿ.ಎಲ್. ವೇಣುಪ್ರಶ್ನಿಸಿದ್ದಾರೆ. ‘ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವೆಸಗಿ ಜೈಲುಪಾಲಾಗಿರುವ ಸ್ವಾಮೀಜಿ ಕೃತ್ಯವನ್ನು ಈವರೆಗೆ ಜನಪ್ರತಿನಿಧಿಗಳಾರೂ ಖಂಡಿಸಲಿಲ್ಲ. ರಾಜಕಾರಣಿಗಳಿಗೆ ಸಮುದಾಯದ ವೋಟಿನ ಚಿಂತೆ. ಇತರ ಸ್ವಾಮೀಜಿಗಳೂ ಖಂಡಿಸದೇ ಮೌನವಾಗಿರೋದು ಬೆಂಬಲಿಸಿದ ಹಾಗಲ್ಲವೆ’ ಎಂದು ವೇಣು ಅವರು ತಮ್ಮ ‘ಫೇಸ್‌ಬುಕ್’ ಪುಟದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದು, ಜನಪ್ರತಿನಿಧಿಗಳು ಮೌನವಾಗಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
Join The Telegram | Join The WhatsApp |