Join The Telegram | Join The WhatsApp |
ಮೊಳಕಾಲ್ಮುರು: ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ತಜ್ಞರಾದ ಡಾ ಬಿ ಸುದರ್ಶನ್ ವರ್ಗಾವಣೆಯನ್ನು ರದ್ದುಗೊಳಿಸಬೇಕು , ದೇವಸಮುದ್ರ ಹೋಬಳಿಯ ಸುತ್ತಮುತ್ತ 45 ಹಳ್ಳಿಗಳು ಸೇರುತ್ತವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಈ ಒಂದು ಆರೋಗ್ಯ ಸಮುದಾಯ ಕೇಂದ್ರಕ್ಕೆ ಪ್ರತಿನಿತ್ಯ 200 ರಿಂದ 300 ವರ ರೋಗಿಗಳು ಚಿಕಿತ್ಸೆಗಾಗಿ ರಾಂಪುರ ಆರೋಗ್ಯ ಕೇಂದ್ರವನ್ನು ಅವಲಂಬಿಸಿತರಾಗಿದ್ದಾರೆ.
ವಿಶೇಷವಾಗಿ ಚಿಕ್ಕ ಮಕ್ಕಳ ಚಿಕಿತ್ಸೆಗೆ ಪ್ರತಿನಿತ್ಯ ಬಳ್ಳಾರಿಗೆ ಹೋಗಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ ಆದ್ದರಿಂದ ರಾಂಪುರ ಆರೋಗ್ಯ ಕೇಂದ್ರಕ್ಕೆ ಮಕ್ಕಳ ತಜ್ಞರಾದ ಸುದರ್ಶನ್ ರವರು ಇದೇ ಆಸ್ಪತ್ರೆಯಲ್ಲಿ ಇನ್ನು ಕೆಲ ಕಾಲ ಚಿಕಿತ್ಸೆ ನೀಡಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ವರ್ಗಾವಣೆ ಆದೇಶವನ್ನು ಹಿಂಪಡೆದು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕು ಎಂದರು.
ಈ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು ಪ್ರಗತಿಪರಿಚಿಂತಕರು ಸಾಮಾಜಿಕ ಕಾರ್ಯಕರ್ತರು ಮತ್ತು ಡಿ ಬಿ ಬಸವರಾಜ್ ರಾಂಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಲಕ್ಷ್ಮಣ್ ಹೊನ್ನೂರು ಸ್ವಾಮಿ ಕುಮಾರ ರಾಮಕೃಷ್ಣ ಗಂಗಾಧರೆಡ್ಡಿ ಬಸವರಾಜ ವಡೇರಹಳ್ಳಿ ಡಿ ಬಸವರಾಜ್ ಹುಲ್ಲಿಗಪ್ಪ ಗಂಗಾಧರ ಪೂಜಾರಿ ಇನ್ನೂ ಹಲವರು ಉಪಸ್ಥಿತರಿದ್ದರು
ವರದಿ : ಪಿಎಂ ಗಂಗಾಧರ್
Join The Telegram | Join The WhatsApp |