Ad imageAd image
- Advertisement -  - Advertisement -  - Advertisement - 

ರೇಣುಕಾಸ್ವಾಮಿ ಮೇಲೆ ನಟ ದರ್ಶನ್ & ಗ್ಯಾಂಗ್ ಕ್ರೌರ್ಯದ ಫೋಟೋ ವೈರಲ್ 

Bharath Vaibhav
ರೇಣುಕಾಸ್ವಾಮಿ ಮೇಲೆ ನಟ ದರ್ಶನ್ & ಗ್ಯಾಂಗ್ ಕ್ರೌರ್ಯದ ಫೋಟೋ ವೈರಲ್ 
WhatsApp Group Join Now
Telegram Group Join Now

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ನಿನ್ನೆ ಕೋರ್ಟ್ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ & ಗ್ಯಾಂಗ್ ಕ್ರೌರ್ಯದ ಸತ್ಯ ಅನಾವರಣವಾಗಿದೆ.

ಬೆಂಗಳೂರಿನ ಆರ್. ಆರ್ .ನಗರದ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿಯನ್ನು ಹಲ್ಲೆ ಮಾಡಿರುವ ಫೋಟೋ ರಿವೀಲ್ ಆಗಿದ್ದು, ಸಣಕಲು ದೇಹದ ರೇಣುಕಾಸ್ವಾಮಿ ಮಂಡಿಯೂರಿ ತಪ್ಪಾಗಿದೆ ಕ್ಷಮಿಸಿ ಎಂದು ಬೇಡಿಕೊಳ್ಳುತ್ತಿರುವುದು ಈ ಫೋಟೋ ಮೂಲಕ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿರುವ ಭಯಾನಕತೆ ಬಯಲಾಗಿದೆ.

ಕೊಲೆಯಾದ ರೇಣುಕಾಸ್ವಾಮಿ ಫೋಟೋಗಳನ್ನು ಆರೋಪಿ ವಿನಯ್ ಮೊಬೈಲ್​ನಲ್ಲಿ ಸೆರೆಹಿಡಿದಿದ್ದನು. ಫೋಟೋ ಕ್ಲಿಕ್ಕಿಸಿ ಬಳಿಕ ಸ್ಮಾರ್ಟ್​ಫೋನ್​ನಿಂದ ಡಿಲೀಟ್ ಮಾಡಿದ್ದನು. ಆದರೆ FSL ಟೀಂ ಡಿಲೀಟ್ ಆದ ಫೋಟೋಗಳನ್ನ ​ರಿಟ್ರೀವ್ ಮಾಡಿದೆ.

ವಿನಯ್ ಫೋನ್​​ನಲ್ಲಿದ್ದ 10ಕ್ಕೂ ಹೆಚ್ಚು ಫೋಟೋಗಳನ್ನು ರಿಟ್ರೀವ್ ಮಾಡಲಾಗಿದೆ. ಇದೀಗ ರೇಣುಕಾಸ್ವಾಮಿ ಎರಡು ಲಾರಿಗಳ ಮಧ್ಯೆ ಬಿದ್ದಿರುವ ಮೃತ ರೇಣುಕಾಸ್ವಾಮಿಯ ಫೋಟೋ ರಿವೀಲ್ ಆಗಿದ್ದು, ಡಿ ಗ್ಯಾಂಗ್ ಕ್ರೌರ್ಯದ ಸತ್ಯ ಅನಾವರಣಗೊಂಡಿದೆ.

ದರ್ಶನ್, ಅವರ ಪಾರ್ಟ್ನರ್ ಪವಿತ್ರಾ ಗೌಡ ಮತ್ತು 15 ಸಹಚರರ ವಿರುದ್ಧ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, ಪಿತೂರಿ, ಯೋಜನೆ, ಅಪಹರಣ, ಚಿತ್ರಹಿಂಸೆ, ಕೊಲೆ, ಸಾಕ್ಷ್ಯ ನಾಶದಲ್ಲಿ ದರ್ಶನ್, ಗೌಡರ ಪಾತ್ರ ಮತ್ತು ಅವರ ಅಭಿಮಾನಿ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಅವರ ನಾಲ್ವರು ಸಹಚರರನ್ನು ಪೊಲೀಸರಿಗೆ ಶರಣಾಗುವಂತೆ ಮಾಡುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸುವ ಯೋಜನೆಯನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.

 

 

WhatsApp Group Join Now
Telegram Group Join Now
Share This Article
error: Content is protected !!