ಪಾವಗಡ: ತಾಲೂಕು ಪ್ರಾಥಮಿಕ ಸಹಕಾರಿ ಸಂಘ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರ ಆಯ್ಕೆ ಚುನಾವಣೆಗೆ ಜ. 15ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಜ.17 ಕೊನೆಯ ದಿನವಾಗಿದೆ. ಈವರೆಗೂ ಒಟ್ಟು 48 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣೆ ಅಧಿಕಾರಿ ವೆಂಕಟೇಶ್ ಸಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಜ15. ರಿಂದ ಜ.17 ಕೊನೆಯ ದಿನದೊಳಗೆ ಒಟ್ಟು 48 ಜನ ಅಭ್ಯರ್ಥಿಗಳು ಕಸಬಾ ಹೊಬಳಿ 4 ಕ್ಷೇತ್ರ, ನಾಗಲಮಡಿಕೆ ಹೋಬಳಿ -3 ನಿಡಗಲ್ ಹೋಬಳಿ- 3. ವೈ,ಎನ್ ಹೊಸಕೋಟೆ ಹೋಬಳಿ- 3. ಸಾಲ ಪಡೆಯದ -1. ಒಟ್ಟು14 ಕ್ಷೇತ್ರಗಳಿಗೆ ಸ್ಪರ್ಧಿಸಬೇಕಿದೆ. ಸಾಲಗಾರ ಕ್ಷೇತ್ರದ 147 ಮತದಾರರು ಮತ್ತು ಸಾಲಗಾರಲ್ಲದ ಕ್ಷೇತ್ರದಲ್ಲಿ 65 ಮತದಾರರಿದ್ದಾರೆ. ಅರ್ಜಿಗಳ ಪರಿಶೀಲನೆ ಬಳಿಕ ಜ.19ರಂದು ಅಭ್ಯರ್ಥಿಗಳ ಪಟ್ಟಿ ಹಾಗೂ ಚುನಾವಣೆ ಚಿಹ್ನೆಗಳನ್ನು ಪ್ರಕಟಿಸಲಾಗುವುದು. ಜ.25 ರಂದು ಚುನಾವಣೆ ಹಾಗೂ ಫಲಿತಾಂಶ ಪ್ರಕಟಣೆ ಆಗಲಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನಾಗಲಮಡಿಕೆ ಹೋಬಳಿಯ ವತಿಯಿಂದ ತಾಲೂಕು ಪ್ರಾಥಮಿಕ ಸಹಕಾರಿ ಸಂಘ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಹಿಂದುಳಿದ ವರ್ಗಗಳ ಬಾ ಕ್ಷೇತ್ರಕೆ ಜೆಡಿಎಸ್ ಪಕ್ಷದ ವತಿಯಿಂದ ಕೆಂಚಗಾನಹಳ್ಳಿ ಬತ್ತಲ್ಲ ಓಬಳೇಶಪ್ಪ ರವರು ನಿರ್ದೇಶಕ ಸ್ಥಾನಕ್ಕೆ ದಿನಾಂಕ 17/01/25 ಶುಕ್ರವಾರ ರಂದು ಪಿ ಎಲ್ ಡಿ ಬ್ಯಾಂಕ್ ನಲ್ಲಿ ನಾಮಪತ್ರ ಸಲ್ಲಿಸಿರುತ್ತಾರೆ ಬತ್ತಲ ಓಬಳೇಶಪ್ಪ ರವರು ಕಳೆದ ಐದು ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಕೆಂಚಗಾನಹಳ್ಳಿ ಬತ್ತಲ ಓಬಳೇಶಪ್ಪರವರು ನಾಮಪತ್ರ ಸಲ್ಲಿಸುವುದಕ್ಕೆ ಇವರ ಜೊತೆಯಲ್ಲಿ ಭಾಗವಹಿಸಿದವರು. ಜೆಡಿಎಸ್ ಪಕ್ಷದ ತಾಲೂಕ್ ಅಧ್ಯಕ್ಷರು. ಈರಣ್ಣ. ಜೆಡಿಎಸ್ ಪಕ್ಷದ ತಾಲೂಕು ಯುವ ಅಧ್ಯಕ್ಷರು ಮಂಜುನಾಥ ಚೌದರಿ. ಜೆಡಿಎಸ್ ಪಕ್ಷದ ತಾಲೂಕು ರೈತ ಘಟಕದ ಅಧ್ಯಕ್ಷರು ಗಂಗಾಧರ ನಾಯ್ಡು. ಜೆಡಿಎಸ್ ಪಕ್ಷದ ತಾಲೂಕು ವಕ್ತರ ಅಕ್ಕಲಪ್ಪ ನಾಯ್ಡು. ಇನ್ನು ಮುಂತಾದವರು ಜೆಡಿಎಸ್ ಪಕ್ಷದ ಮುಖಂಡರಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು
ವರದಿ: ಶಿವಾನಂದ