ನಿಪ್ಪಾಣಿ.:-ಬೆಳಗಾವಿ ಗಡಿಯೊಳಗೆ ನುಗ್ಗಲು ಯತ್ನಿಸಿದ ಶಿವಸೇನೆಮುಖಂಡರು, ಕಾರ್ಯಕರ್ತರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಎಂ ಇ ಎಸ್ ಕರಾಳ ದಿನ ಆಚರಣೆ ನಿಷೇಧಿಸಿರುವ ಬೆನ್ನಲ್ಲೆ ಅಕ್ರಮವಾಗಿ ಗಡಿ ಪ್ರವೇಶ ಯತ್ನಿಸಿದ ಸುಮಾರು 30ರಿಂದ 50 ಜನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಲ್ಲದೆ, ಕೊಲ್ಲಾಪುರದ ಪೊಲೀಸರು ಶಿವಸೇನೆ ನಾಯಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ವರದಿ ರಾಜು ಮುಂಡೆ ನಿಪ್ಪಾಣಿ.