Ad imageAd image
- Advertisement -  - Advertisement -  - Advertisement - 

ದರೋಡೆ ಮಾಡಲು ಯತ್ನಿಸುತ್ತಿದ್ದವರನ್ನು ಪೊಲೀಸರು ಬಿರುಸಿನ ಕಾರ್ಯಚರಣೆ ನಡೆಸಿ ಬಂಧಿಸಿದರು.

Bharath Vaibhav
ದರೋಡೆ ಮಾಡಲು ಯತ್ನಿಸುತ್ತಿದ್ದವರನ್ನು ಪೊಲೀಸರು ಬಿರುಸಿನ ಕಾರ್ಯಚರಣೆ ನಡೆಸಿ ಬಂಧಿಸಿದರು.
WhatsApp Group Join Now
Telegram Group Join Now

ಬಾದಾಮಿ:- ದಿನಾಂಕ 10/07/2024 ರಂದು ರಾತ್ರಿ 1:15 ಗಂಟೆ ಸುಮಾರಿಗೆ ಬಾದಾಮಿ ಪೊಲೀಸ್ ಠಾಣೆಯ ಕ್ರೈಮ್ ಪಿ ಎಸ್ ಐ ವಿಜಯಕುಮಾರ್ ರಾಠೋಡ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಬಾದಾಮಿ ಹೊರವಲಯದ ಗದಗ ಬೈಪಾಸ್ ರಸ್ತೆ ಹತ್ತಿರ 05 ಜನ ಪೊಲೀಸರನ್ನು ಕಂಡು ಓಡಿ ಹೂವುತ್ತಿರುವುದನ್ನು ಪಿ ಎಸ್ ಐ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಕಳ್ಳರನ್ನು ಬೆನ್ನಟ್ಟಿ ಹಿಡಿಡಿದ್ದಾರೆ.

ಈ ಪೈಕಿ ಒಬ್ಬ ಆರೋಪಿ ಪರಾರಿ ಆಗಿದ್ದು ಉಳಿದ 4 ಜನರಲ್ಲಿ ಒಬ್ಬನು ವಯಸ್ಕನಿದ್ದು ಹಾಗೂ 3 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರಿದ್ದು ಅವರನ್ನು ವಿಚಾರಿಸಿದಾಗ ತಾವೆಲ್ಲ ಸೇರಿಕೊಂಡು ತಾವು ತಂದಿದ್ದ ಹಗ್ಗ,ರಾಡು,ಕಾರದ ಪುಡಿಯನ್ನು ಇಟ್ಟುಕೊಂಡು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ದರೋಡೆ ಮಾಡುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಹಾಗೂ 3 ಜನ ಕಾನೂನು ಸಂಘರ್ಷಕ್ಕೊಳಗಾದಬಾಲಕರಿಂದ ಮಾರುತಿ ಸುಜುಕಿ ಕಂಪನಿಯ ಕಾರು ಹಾಗೂ, ಸುಮಾರು ಆರು ಲಕ್ಷ ಇಪ್ಪತ್ತೆರಡು ಸಾವಿರ ರೂಪಾಯಿ ಕಿಮ್ಮತ್ತಿನ 42 ವಿವಿಧ ಬಗೆಯ ಕಂಪನಿಯ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಾದಾಮಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ದರೋಡೆಕೊರರನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧಿಕ್ಷಕರಾದ ಪ್ರಸನ್ ದೇಸಾಯಿ, ಮಹಾಂತೇಶ್ ಜಿದ್ದಿ,, ಹುನಗುಂದ ಡಿ ವಾಯ್ ಎಸ್ ಪಿ ವಿಶ್ವನಾಥರಾವ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಲಾಯಿತು. ಬಾದಾಮಿ ಸಿ ಪಿ ಐ ಕರಿಯಪ್ಪ. ಬಿ. ಬನ್ನೇ ಪಿ ಎಸ್ ಐ ವಿಠಲ್ ನಾಯಿಕ, ಕ್ರೈಮ್ ಪಿ ಎಸ್ ಐ ವಿಜಯಕುಮಾರ್ ರಾಠೋಡ, ಸಿಬ್ಬಂದಿಗಳಾದ ಎ ಎಸ್. ಚವ್ಹಾಣ, ಎಸ್ ಬಿ. ಮುತ್ತಲಗೇರಿ, ವಿ. ಜೆ. ರಾಠೋಡ,, ಎನ್. ಪಿ. ಅಂಕೋಲ, ಜೆ. ಎಸ್. ಸುಣಗ, ಎಂ. ಬಿ. ಖಾನಾಪೂರ,, ಎಲ್. ಎನ್. ತೋಳಮಟ್ಟಿ,, ಬಿ. ಎಸ್. ಹುಲ್ಲಣ್ಣವರ, ಎನ್. ಎಲ್. ಗೌಡರ,, ಎಚ್ ಎಸ್. ಮಸಳಿ,, ವಾಯ್.ಜಿ. ಕುರಬರ,, ಎಚ್. ಎಲ್. ಚಲವಣ್ಣವರ,, ಎಚ್. ಸಿ. ಚಂದ್ರಶೇಖರ,, ಎಂ. ಪಿ. ಹರದೊಳ್ಳಿ ಭಾಗವಹಿಸಿದ್ದರು.

ಬಾದಾಮಿ ಪೊಲೀಸ್ ಇಲಾಖೆಯ ಈ ಕಾರ್ಯಚಾರಣೆಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!