ರಾಯಚೂರು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಟೀಂ ಹಾಗೂ ಪಶ್ಚಿಮ ಠಾಣೆ ಪೊಲೀಸರಿಂದ ಜಂಟಿ ಕಾರ್ಯಾಚರಣೆ.10 ಲಕ್ಷ ಅಸಲಿ ಹಣ ಕೊಟ್ರೆ 30 ಲಕ್ಷ ಖೋಟಾ ನೋಟು ಕೊಡ್ತಿದ್ದ ಗ್ಯಾಂಗ್.. ರಾಯಚೂರಿನ ಶಶಸ್ತ್ರ ಮೀಸಲು ಪಡೆದ ಕಾನ್ಸ್ಟೇಬಲ್ ಸೇರಿ ನಾಲ್ವರ ಬಂಧನ ಸದ್ದಾಂ ಮೊಹಮ್ಮದ್ ಯಾಸಿನ್,ಶಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್ ಮರಿಲಿಂಗ, ರಮೇಶ್ ಆದಿ ಹಾಗೂ ಶಿವಲಿಂಗ ಬಂಧಿತರು.
ಹೈದ್ರಾಬಾದ್ನ ಕಿಂಗ್ಪಿನ್ವೊಬ್ಬರ ಅಣತೆಯಂತೆ ಕಾನ್ಸ್ಟೇಬಲ್ ಮರಿಲಿಂಗ ಹಾಗೂ ಆತನ ಸಹಚರ ಶಿವಲಿಂಗನಿಂದ ರಾಯಚೂರಿನಲ್ಲಿ ಡೀಲ್..ಲಾರಿ ವ್ಯಾಪಾರಿಗಳಾಗಿದ್ದ ಸದ್ದಾಂ ಹಾಗೂ ರಮೇಶ್ ಜೊತೆ ಡೀಲಿಂಗ್..
ಮಿನಿಮಮ್ 10 ಲಕ್ಷ ಅಸಲಿ ನೋಟು ಕೊಟ್ರೆ ಮಾತ್ರ 30 ಲಕ್ಷ ಖೋಟಾ ನೋಟು ಕೊಡೊ ಡೀಲ್
ಮೊದಲ ಹಂತವಾಗಿ 4 ಲಕ್ಷ ನೀಡಿದ್ದ ಲಾರಿ ವ್ಯಾಪಾರಿ ಸದ್ದಾಂ.. ಖೋಟಾ ನೋಟು ತಯಾರಿಕೆಗೆ ಬೇಕಾಗೊ ವೈಟ್ ಪೇಪರ್ಗಳು ಕೆಲ ಕಚ್ಚಾ ವಸ್ತು ನೀಡಿದ್ದ ಗ್ಯಾಂಗ್.. ಸದ್ದಾಂ ಮನೆಯನ್ನ ಬಾಡಿಗೆ ಪಡೆದು ಅಲ್ಲೇ ಖೋಟಾ ನೋಟು ತಯಾರಿಕೆಗೆ ಸಿದ್ಧತೆ.. ಈ ವೇಳೆ ದಾಳಿ ನಡೆಸಿದ್ದ ಪೊಲೀಸರು,ವೈಟ್ ಪೇಪರ್ ಹಾಗೂ ಕಚ್ಚಾ ವಸ್ತುಗಳು ಜಪ್ತಿ..
ಈ ಬಗ್ಗೆ ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವರದಿ: ಗಾರಲದಿನ್ನಿ ವೀರನಗೌಡ