ರಾಮದುರ್ಗ:- ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ್ಯಾದಂತ ಸಿಡಿಮದ್ದು ಗೋದಾಮು ಹಾಗೂ ಮಾರಾಟ ಮಾಡುವ ಸ್ಥಳಗಳವನ್ನು ಭೇಟಿನೀಡಿದ ರಾಮದುರ್ಗ ತಾಲೂಕು ದಂಡಧಿಕಾರಿಗಳಾದ ಪ್ರಕಾಶ್ ಹೊಳಪುಗೋಳ.
ಬೆಳಗಾವಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ರಾಮದುರ್ಗ ತಾಲೂಕಿನ ಎಲ್ಲಾ ಸಿಡಿಮದ್ದು ಅನುಜ್ಞಾ ಪತ್ರಗಳ ಕುರಿತು ಗೋದಾಮು ಹಾಗೂ ಮಾರಾಟ ಮಾಡುವ ಸ್ಥಳಗಳನ್ನು ನಿಯಮಾನುಸಾರ ಪರಿಶೀಲಿಸಿ ನಿಖರವಾದ ಜಂಟಿ ವರದಿ ಸಲ್ಲಿಸಲು ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಗಳ ಜಂಟಿ ತಂಡ ರಚಿಸಿ ಸಂಬಂಧಪಟ್ಟ ಅಧಿಕಾರಿಗಳು 3 ಒಳಗಾಗಿ ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿ ನಿಖರವಾದ ಸಮಗ್ರ ಜಂಟಿ ವರದಿಯನ್ನು ಸಲ್ಲಿಸಲು ಸೂಚಿಸಿದ್ದಾರೆ.
ರಾಮದುರ್ಗ ತಾಲೂಕಿನಲ್ಲಿ ಉಲ್ಲೇಖಿತ ಪತ್ರದಲ್ಲಿರುವ 07 ಸಿಡಿಮದ್ದು ಲೈಸನ್ಸ್ ದಾರರ ಸಿಡಿಮದ್ದು ಅನುಜ್ಞಾ ಪತ್ರಗಳ ಕುರಿತು ಹಾಗೂ ಗೋದಾಮು ಹಾಗೂ ಮಾರಾಟ ಮಾಡುವ ಸ್ಥಳಗಳನ್ನು, ಅನಧೀಕೃತವಾಗಿ ಗೋದಾಮುಗಳಲ್ಲಿ ಸಂಗ್ರಹ ಮಾಡಿದ ಬಗ್ಗೆ, ಅನುಮತಿ ಇಲ್ಲದ ಸ್ಥಳಗಳಲ್ಲಿ ಇಟ್ಟು ವ್ಯಾಪಾರ ಮಾಡುತ್ತಿರುವ ಬಗ್ಗೆ ಮತ್ತು ಮಾರ್ಗಸೂಚಿಗಳ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಹಾಗೂ ಬೆಂಕಿ ಅನಾಹುತ ತಪ್ಪಿಸುವಸಲುವಾಗಿ ಮುಂಜಾಗೃತಾ ಕ್ರಮಗಳನ್ನು (Fire Extinguisher) ಅಳವಡಿಸಿರುವ ಬಗ್ಗೆ ತಪಾಸಣೆ ಮಾಡಿ ನಿಯಮಾನುಸಾರ ಪರಿಶೀಲಿಸಿದರು.
ಈ ಸಂಧರ್ಭದಲ್ಲಿ ಪೊಲೀಸಧಿಕಾರಿಯಾದ CPI ಆಯ್ ಆರ್ ಪಟ್ಟಣಶೆಟ್ಟಿ, ರಾಮದುರ್ಗ ಅಗ್ನಿಶಾಮಕ ಠಾಣಾಧಿಕಾರಿಯಾದ T D ವಡ್ಡರ್, ಕಂದಾಯ ನಿರೀಕ್ಷಕರು ಲೋಕೇಶ್ ಚವಾನ್,ಉಪಸ್ಥಿತರಿದ್ದರು
ವರದಿ:-ಮಂಜುನಾಥ ಕಲಾದಗಿ