Join The Telegram | Join The WhatsApp |
ಬೆಳಗಾವಿ : ಬುಧವಾರ ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಭಾವತಿ ಮಾಸ್ತಮರಡಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು..
ಇದೆ ವೇಳೆ ಮಾತನಾಡುತ್ತಾ ಜ.10ರಂದು ಮಂಗಳವಾರ ನನ್ನ 43ನೇ ಹುಟ್ಟು ಹಬ್ಬದ ನಿಮಿತ್ಯ ಬೆಳಗಾವಿಯ ದಕ್ಷಿಣ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ ಎಂದು ಪ್ರಭಾತಾಯಿ ಫೌಂಡೇಶನ್ ಅಧ್ಯಕ್ಷೆ ಪ್ರಭಾವತಿ ಮಾಸ್ತಮರಡಿ ತಿಳಿಸಿದ್ದಾರೆ.
ಬಸವೇಶ್ವರ ವೃತ್ತ, ಖಾಸಬಾಗದಲ್ಲಿ ಮಾಜಿ ಸೈನಿಕರು, ಹಿರಿಯ ನಾಯಕರಿಗೆ ಸತ್ಕಾರ, ಅನಾಥ ಮಕ್ಕಳಿಗೆ ಸ್ವೇಟರ್ ವಿತರಿಸುತ್ತಿದ್ದೇವೆ.
ಖ್ಯಾತ ಗಾಯಕರಾದ ಚಂದನ ಶೆಟ್ಟಿ, ಶಮಿತಾ ಮಲ್ನಾಡ, ರಾಜೇಶ ಕೃಷ್ಣನ್ ಸೇರಿ ಅನೇಕ ಕಲಾವಿದರಿಂದ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ತೇರದಾಳ ಮತ್ತು ಬೆಳಗಾವಿ ದಕ್ಷಿಣ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದೇನೆ. ಹೈಕಮಾಂಡ್ ಯಾವ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟರೂ ಸ್ಪರ್ಧಿಸಲು ಸಿದ್ಧಳಿದ್ದೇನೆ, ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಉತ್ತಮವಾಗಿ ನಡೆಯುತ್ತಿದ್ದು, ಈ ಸಲ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ವಿಶ್ವಾಸವಿದೆ ಎಂದರು..
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |