ಯಲಬುರ್ಗಾ: -ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು, ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣ ಸಂಯೋಜಕ ಕನಕಪ್ಪ ಕಂಬಳಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಶ್ರೀಮತಿ ನೀಲಮ್ಮ ಶಿವಶಂಕರರಾವ್ ದೇಸಾಯಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಮಗ್ರ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮನ್ವಯಾಧಿಕಾರಿಗಳ ಕಾರ್ಯಾಲಯ ಮತ್ತು ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದರು.
ನಶಿಸುತ್ತಿರುವ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ, ಸರ್ಕಾರ ಕೊಡುವ ಕಡಿಮೆ ಹಣದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಕಷ್ಟವಾಗಿದ್ದರೂ ಕೂಡಾ ಗ್ರಾಮಸ್ಥರ ಮತ್ತು ಮಕ್ಕಳ ಪೋಷಕ ವರ್ಗದವರ ಸಹಕಾರದೊಂದಿಗೆ ನಡೆಸುತ್ತಿರುವುದು ಮಕ್ಕಳ ಪೋಷಕರಲ್ಲಿ ಸಂತಸ ತಂದಿದೆ.
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕಲಾ ಚಟುವಟಿಕೆಗಳ ಪ್ರತಿಭೆಯಿದ್ದರೂ ಸಹ ಅವಕಾಶಗಳು ಸಿಗುತ್ತಿರಲಿಲ್ಲ, ಇದನ್ನೆಲ್ಲ ಗಮನಿಸಿದ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಅನುವು ಮಾಡಿಕೊಡುವುದರ ಸಲುವಾಗಿ ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ ಎಂದರು.
ಎಸ್ಡಿಎಂಸಿ ಅಧ್ಯಕ್ಷರಾದ ಶಾಂತಪ್ಪ ಚಂಡೂರು ಹಾಗೂ ನಿಂಗಪ್ಪ ಮದ್ಗುಣ್ಕಿ, ಯಮನೂರಸಾಬ ನಧಾಪ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶರಣಪ್ಪ ಕುರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪಿಡಿಒ ವೆಂಕಟೇಶ ನಾಯಕ್, ಸದಸ್ಯರಾದ ಶರಣಪ್ಪ ಹಾದಿಮನಿ, ಶರಣಕುಮಾರ್ ಅಮರಗಟ್ಟಿ, ಮಂಜುಳಾ ಚನ್ನಪ್ಪನಹಳ್ಳಿ, ಶರಣಪ್ಪ ಕರಡದ, ಹುಚ್ಚಮ್ಮ ಉಪ್ಪಾರ, ಶರಣಯ್ಯ ಬಂಡಿಹಾಳ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಮಾಲಿಪಾಟೀಲ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಶರಣಯ್ಯ ಸರಗಣಚಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಧರಣಾ, ನೌಕರ ಸಂಘದ ಕಾರ್ಯದರ್ಶಿ ದೇವಪ್ಪ ಮುಗಳಿ, ನಿರ್ದೇಶಕ ನಾಗರಾಜ ನಡುಲಕೇರಿ, ಶಿಕ್ಷಣ ಸಂಯೋಜಕ ಶರಣಪ್ಪ ರ್ಯಾವಣಕಿ, ಬಿಆರ್ ಪಿ ಶಿವಪ್ಪ ಉಪ್ಪಾರ, ಸಿಆರ್ ಪಿ ಸಿ.ಡಿ.ಹಳ್ಳಿ, ನಿವೃತ್ತ ಶಿಕ್ಷಕ ರಾಮಣ್ಣ ತಳವಾರ, ಸೂಗಿರಪ್ಪ ಬಳಿಗಾರ, ವೀರಪ್ಪ ಅಂಗಡಿ, ಮುಖ್ಯೋಪಾಧ್ಯಾಯರಾದ ಸುರೇಶ ವೇದಪಾಠಕ, ಚಿನ್ನುಭಾಷ ಅತ್ತಾರ, ಶಿವಮೊಗೆಪ್ಪ ಜಾಲಿಹಾಳ ಸೇರಿದಂತೆ ಕ್ಲಸ್ಟರ್ ಮಟ್ಟದ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ವರದಿ: ಶರಣಕುಮಾರ್ ಅಮರಗಟ್ಟಿ