ನಿಪ್ಪಾಣಿ: ಶತಮಾನೋತ್ಸವ ಶಾಲೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ ದ ಕುವೆಂಪು ಶಾಲೆ ಆವರಣದಲ್ಲಿ ಸರ್ಕಾರಿ ಕನ್ನಡ ಪ್ರಾಥಮಿಕ ಪ್ರೌಢಶಾಲೆ ಸರ್ಕಾರಿ ಮರಾಠಿ ಡಾ. ಬಿಆರ್ ಅಂಬೇಡ್ಕರ್ ಸರ್ಕಾರಿ ಪ್ರಾಥಮಿಕ ಉರ್ದು ಹಾಗೂ ಮೌಲಾನ ಆಜಾದ್ ಬಾಲಕ ಬಾಲಕಿಯರ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗಾಗಿ ಫುಟ್ಪಾತ್ ಕುರಿತು ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಮಕ್ಕಳು ಶಾಲೆಗೆ ಬರುವಾಗ ಹಾಗೂ ಹೋಗುವಾಗ ರಸ್ತೆ ಪಕ್ಕಕ್ಕೆ ನಿರ್ಮಿಸಲಾದ ಕಾಲುದಾರಿಯಿಂದಲೇ ಜಾಗೃತರಾಗಿ ತೆರಳಬೇಕು ಅತ್ಯಂತ ಜನದಟ್ಟೆಯ ಮಧ್ಯೆ ಮಕ್ಕಳು ಸಾಗುವಾಗ ಎಚ್ಚರದಿಂದಿರಬೇಕು ರಸ್ತೆ ಕ್ರಾಸ್ ಮಾಡುವುದು ಅಡ್ಡಾದಿಡ್ಡಿ ಓಡಾಡುವುದನ್ನು ಮಾಡದೆ ಶಾಂತ ಚಿತ್ತದಿಂದ ಮನೆ ತಲುಪಬೇಕೆಂದು ಮಕ್ಕಳಿಗೆ ಸಂಚಾರ ನಿಯಮಗಳನ್ನು ವಿವರಿಸಲಾಯಿತು.
ಪ್ರಾರಂಭದಲ್ಲಿ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಡಿಎಸ್ ಪಾಟೀಲ್ ಸಾಹಿತಿ ಪಿಎಂ ಭೋಜೆ ಶ್ರೀನಿವಾಸ ನವಲೇ ಚಿದಾನಂದ ಸಾರವಾಡೆ ಸರ್ ಸಮೂಹ ಸಂಪನ್ಮೂಲ ವ್ಯಕ್ತಿ ಸಂಜಯ ಮಡ್ದೆ ಅಜರುದ್ದಿನ ಸೇಕಜಿ ಮಾತನಾಡಿ ಮಕ್ಕಳು ದೇಶದ ಆಸ್ತಿ ಮಕ್ಕಳ ಜೀವ ಅತ್ಯಂತ ಮಹತ್ವದ್ದು ಮಾನವೀಯತೆ ಬೆಳಗಬೇಕಾದರೆ ಪುಟಪಾತ್ ಸರಿಯಾಗಿ ಬಳಸಿಕೊಳ್ಳಬೇಕು, ಸಂಚಾರ ನಿಯಮ ಪಾಲಿಸುವುದರೊಂದಿಗೆ ಮಕ್ಕಳು ಪ್ರತಿ ಹೆಜ್ಜೆಯನ್ನು ಎಚ್ಚರದಿಂದಿಡಬೇಕು ಎಂದರು ಸಭೆಯಲ್ಲಿ ಪುಟ್ ಪಾತ್ ಸಮಿತಿಯ ಸದಸ್ಯರು ಸಂಜಯ ಕೋರೆ ರಾಜಕುಮಾರ್ ಡಾಂಗೆ ಕೈಲಾಸ್ ಮಾಳಗೆ ಸೇರಿದಂತೆ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಮಹಾವೀರ ಚಿಂಚನೆ