Ad imageAd image
- Advertisement -  - Advertisement -  - Advertisement - 

ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತ ವೀರೇಶ್ ಶಿಂಪಿ ಯವರ 43 ನೇ ಹುಟ್ಟುಹಬ್ಬ

Bharath Vaibhav
ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತ ವೀರೇಶ್ ಶಿಂಪಿ ಯವರ 43 ನೇ ಹುಟ್ಟುಹಬ್ಬ
WhatsApp Group Join Now
Telegram Group Join Now

ಕಂದಗಲ್ಲ : ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತ ವೀರೇಶ್ ಶಿಂಪಿಯವರ 43 ನೇ ವರ್ಷದ ಹುಟ್ಟುಹಬ್ಬವನನ್ನು ಗ್ರಾಮದ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯಾಲಯ ದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ತಾಪಕರದ ಡಾ ಸಂತೋಷ್ ಪೂಜಾರ ರವರು ಪತ್ರಿಕಾ ರಂಗ ನಮ್ಮ ದೇಶದ ನಾಲ್ಕನೇ ಅಂಗ ಹಳ್ಳಿಯಿಂದ ದಿಲ್ಲಿಯವರೆಗೆ ಒಳಗೊಂಡಂತೆ ಈ ಜಗತ್ತಿನ ಪ್ರತಿಯೊಂದು ಸುದ್ದಿಗಳು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ನಮ್ಮ ಪತ್ರಿಕೆಗಳು ಹಾಗೂ ಪತ್ರಕರ್ತರು ಮಾಡುತ್ತಿದ್ದಾರೆ ಹಗಲಿರುಳು ಎನ್ನದೆ ಮಳೆ ಗಾಳಿ ಬಿಸಿಲು ಯಾವುದನ್ನು ಲೆಕ್ಕಿಸದೆ ಕೆಲಸ ಮಾಡುವ ಪತ್ರಕರ್ತರ ಶ್ರಮ ಅವಸ್ಮರಣಿಯ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಇಂದಿನ ವಿಶೇಷ ದಿವಸದಂದೆ ಜನಿಸಿದ ನಿಹಾರಿಕಾ ಗ್ರಾಮೀಣಾಭಿರವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪತ್ರಕರ್ತರಾದ ವೀರೇಶ್ ಶಿಂಪಿ ಯವರ ಹುಟ್ಟುಹಬ್ಬವನ್ನು ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯ ಬಳಗದಿಂದ ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಯುವ ಮುಖಂಡ ರಾಜೇಸಾಬ ಪರಾಸರ ವಹಿಸಿದ್ದರು. ಇಲಕಲ್ಲ ನಗರದ ಶ್ರೀ ಮತಿ ಸಾವಿತ್ರಿ ಪೂಜಾರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಯಂಕಣ್ಣ ಮಳ್ಳಿ,ಅಯ್ಯನಗೌಡ ಪಾಟೀಲ,ರಾಜು ಶಿವನಗುತ್ತಿ, ಸುನಿಲ ಸಾಹುಕಾರ್,ಸೋಮಶೇಖರ್ ಹರಣಶಿಕಾರಿ, ಅಲ್ಮಾಸ ಬಾಗವಾನ, ಅಸ್ಮಾ ಮಸ್ಕಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!