ವಾರಾಣಸಿ : ಕಾಳಿ ದೇವಿ ಪ್ರತ್ಯಕ್ಷ ಆಗಿಲ್ಲ ಎಂದು ಬೇಸತ್ತು ಕತ್ತು ಸೀಳಿಕೊಂಡು ಅರ್ಚಕ ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆಯೊಂದು ವರದಿಯಾಗಿದೆ.
ವಾರಾಣಸಿ ನಗರದ ಕೊತ್ವಾಲಿ ಠಾಣಾ ಪ್ರದೇಶದ ಗಾಯಿ ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೂಜಾರಿಯೋರ್ವ ತಾಯಿ ಕಾಳಿ ಅವರ ಸಾಕ್ಷಾತ್ ದರ್ಶನವನ್ನು ಪಡೆಯದ ಕಾರಣದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲಗಳ ಪ್ರಕಾರ 24 ಗಂಟೆ ಕಾಳಿ ಪೂಜೆ ಮಾಡಿದ ಅರ್ಚಕ ನಂತರ ಕಾಳಿ ಪ್ರತ್ಯಕ್ಷ ಆಗಿಲ್ಲ ಎಂದು ಬೇಸರಗೊಂಡು ಕತ್ತು ಸೀಳಿಕೊಂಡು ಅರ್ಚಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ಬಂದ ಮೇಲೆ ಬಂದ ಪೊಲೀಸ್ ಅಧಿಕಾರಿಗಳು ಶವವನ್ನು ಶವ ಪರೀಕ್ಷೆಗೆ ಕಳುಹಿಸಿದ್ದಾರೆ.
ಪೂಜಾರಿ ಧಾರ್ಮಿಕ ನಂಬಿಕೆಗಳಿಂದ ಬಹಳ ಪ್ರಭಾವಿತನಾಗಿದ್ದನು, ಇದು ಆತ್ಮಹತ್ಯೆಯ ಪ್ರಕರಣವಾಗಿ ತೋರುತ್ತದೆ ಮತ್ತು ಇತರ ಕೋನಗಳಿಂದ ಕೂಡ ತನಿಖೆ ನಡೆಯುತ್ತಿದೆ ಎಂದಿದ್ದಾರೆ.