Join The Telegram | Join The WhatsApp |
ಬೆಂಗಳೂರು : ಫೆಬ್ರವರಿ 6 ರಂದು ಮತ್ತೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈಗಾಗಲೇ ಬಿಜೆಪಿ ಕಾರ್ಯಕರ್ತರಿಂದ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.
ಫೆಬ್ರವರಿ 6 ರಂದು ಬೆಳಗ್ಗೆ 10.55ಕ್ಕೆ ಬೆಂಗಳೂರಿಗೆ ಪ್ರಧಾನಿ ಆಗಮಿಸಲಿದ್ದಾರೆ. ಬಳಿಕ ಬೆಳಗ್ಗೆ 11.30ಕ್ಕೆ ಬಿಐಇಸಿಯಲ್ಲಿ ಇಂಡಿಯಾ ಎನರ್ಜಿ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 2.45ಕ್ಕೆ ಬಿಐಇಸಿಯಿಂದ ತುಮಕೂರು ಜಿಲ್ಲೆಯ ಗುಬ್ಬಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ3.30ಕ್ಕೆ ಹೆಚ್‌ಎಎಲ್ ಹೆಲಿಕಾಪ್ಟರ್ ಪ್ಯಾಕ್ಟರಿ ಲೋಕಾರ್ಪಣೆ ಮಾಡಲಿದ್ದಾರೆ, ಜಲಜೀವನ್ ಮಿಷನ್ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಫೆ6 ರಂದು ಸಂಜೆ 4.45ಕ್ಕೆ ಗುಬ್ಬಿಯಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. ಫೆ.6 ರಂದು ಸಂಜೆ 5.20ಕ್ಕೆ ಬೆಂಗಳೂರಿನಿಂದ ದೆಹಲಿಗೆ ಮೋದಿ ನಿರ್ಗಮನ ಮಾಡಲಿದ್ದಾರೆ.
Join The Telegram | Join The WhatsApp |