ಬೆಳಗಾವಿ :- ಮುದ್ದು ಮಕ್ಕಳ ಜೀವನ ಜೊತೆ ಚೆಲ್ಲಾಟ ಆಡುತ್ತಿರುವ ಪೃಥ್ವಿ ಸೆಂಟ್ರಲ್ ಸ್ಕೂಲ್ ಹಾಗೂ ಅಧಿಕಾರಿಗಳು
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯರಗಟ್ಟಿ ಪಟ್ಟಣದ “ಶ್ರೀ ವೆಂಕಟೇಶ್ವರ ಎಜುಕೇಶನ್ ಸೊಸೈಟಿ (ರಿ)” ಈ ಸಂಸ್ಥೆಯ ಪೃಥ್ವಿ ಸೆಂಟ್ರಲ್ ಸ್ಕೂಲ್ ಈ ಶಾಲೆಯು 2021-22 ಸಾಲೀನಲ್ಲಿ ಅನಧಿಕೃತವಾಗಿ ಅನುಮತಿ ಪಡೆದು ಮಕ್ಕಳ ಶಿಕ್ಷಣದ ಜೊತೆ ಚೆಲ್ಲಾಟ ಹಾಡುತ್ತಿರುವ ಆಡಳಿತ ಮಂಡಳಿ.
ಈಗಿನ ಯುಗಮಾನದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ ಸಿಗಬೇಕೆಂದರೆ, ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ…
ಆದರೆ ಈ ಸಂಸ್ಥೆಯು ಅನುಮತಿ ಪಡೆದಿರುವ ಸ್ಥಳ ಯರಗಟ್ಟಿ ಪಟ್ಟಣ ಪ್ರದೇಶ,
ಆದರೆ ಈ ಶಾಲೆಯು ಅನಧಿಕೃತ ದಾಖಲಾತಿಗಳನ್ನು ನೀಡಿ, ಸುತ್ತಮುತ್ತಲಿನ ಪಾಲಕರಿಗೆ ಗ್ರಾಮೀಣ ಶಾಲೆ ಎಂದು ಬಿಂಬಿಸುವ ಹಾಗೆ ರೈನಾಪುರ್ ಗ್ರಾಮದ ವ್ಯಾಪ್ತಿಯಲ್ಲಿ ನಡೆಸುತ್ತಿದ್ದಾರೆ…
ಅಧಿಕಾರದಲ್ಲಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸವದತ್ತಿ ಹಾಗೂ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಇವರಿಗೆ ಸಾರ್ವಜನಿಕರು ಸಾಕಷ್ಟು ದೂರುಗಳನ್ನು ನೀಡಿದ್ದರು ಕೂಡ, ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಇರುವದರಿಂದ, ಈ ಸಂಸ್ಥೆಯರ ಜೊತೆ ಶಾಮೀಲಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ…
ಏಪ್ರಿಲ್ 2022 ರಿಂದ ಸವದತ್ತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಶೈಲ್ ಕರಿಕಟ್ಟಿ ಇವರು ಈ ಶಾಲೆಯು ಅನಧಿಕೃತವಾಗಿ ಇರುವುದು ಗೊತ್ತಿದ್ದರೂ ಕೂಡ, ಇವರ ಮೇಲೆ ಈ ಹಿಂದೆ ಯಾವುದೇ ರೀತಿ ಕ್ರಮ ಕೈಗೊಳ್ಳದೆ ಇವರ ಜೊತೆ ಶಾಮಿಲ ಆಗಿ ಸರ್ಕಾರದ ನಿಯಮಗಳನ್ನು ಕಡೆಗಣಿಸಸಿದ್ದಾರೆ …
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ್ ಕರಿಕಟ್ಟಿ ಹೇಳಿದ್ದಾರೆ, ಪೃಥ್ವಿ ಸೆಂಟ್ರಲ್ ಸ್ಕೂಲ್ ಯರಗಟ್ಟಿ ಈ ಶಾಲೆಯು ಅನಧಿಕೃತವಾಗಿ ಇದೆ ಎಂದು,
ಈ ಶಾಲೆ ಬಗ್ಗೆ ಸ್ಪಷ್ಟವಾಗಿ ಶ್ರೀಶೈಲ್ ಕರಿಕಟ್ಟಿ ಸಾಹೇಬ್ರೆ ಹೇಳಿದ್ದಾರೆ, ಪಾಲಕರೇ ಸ್ವಲ್ಪ ತಾವು ಇಲ್ಲಿ ಸ್ವಲ್ಪ ಗಮನವಿಟ್ಟು ಕೇಳಿ…ಇಷ್ಟೆಲ್ಲಾ ಗೊತ್ತಿದ್ದರೂ ಕೂಡ ಇದುವರೆಗೆ ಯಾಕೆ ಸಂಸ್ಥೆ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ…
ಈಗಿನ ಮಕ್ಕಳು ಮುಂದಿನ ಪ್ರಜೆಗಳು, ಈ ಶಾಲೆಯಲ್ಲಿ ಕಲಿತಂತ ಮಕ್ಕಳು ಮುಂದಿನ ದಿನಮಾನಗಳಲ್ಲಿ ಸರ್ಕಾರಿ ಕೆಲಸಕ್ಕೆ ಹೊರಡುವ ಸಮಯದಲ್ಲಿ ಮಕ್ಕಳು ಅವರು ಕಲಿತಂತಾ ಶಾಲೆಗಳ ದಾಖಲಾತಿಗಳನ್ನು ಪರಿಶೀಲಿಸುವ ಸಮಯದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿನ ಹಾಗೆ, ಇಲ್ಲಿ ಕಲಿತಂತಾ ಮಕ್ಕಳಿಗೆ ತಪ್ಪು ದಾಖಲಾತಿಗಳನ್ನು ನೀಡಿರುವುದು ಸರ್ಕಾರಿ ಕೆಲಸಕ್ಕೆ ಹೋಗುವ ಸಮಯದಲ್ಲಿ ಗೊತ್ತಾಗುವ ಮುಂಚೆ ಎಚ್ಛೆತ್ತು ಕೊಳ್ಳಬೇಕು…
ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಇವರಿಗೆ ಈಗಾಗಲೇ ಸಾರ್ವಜನಿಕರು ಸಾಕಷ್ಟು ದೂರುಗಳನ್ನು ನೀಡಿದ್ದರು ಇದುವರೆಗೆ ಕ್ಯಾರೇ ಎನ್ನುತ್ತಿಲ್ಲ …,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸದಸ್ಯರು ಕೂಡ ಬೆಳಗಾವಿ ಉಪನಿರ್ದೇಶಕರಾದ ಶ್ರೀ ಬಸವರಾಜ ನಾಲತವಾದ ಇವರಿಗೆ ಖುದ್ದಾಗಿ ಭೇಟಿಯಾಗಿ ಅನಧಿಕೃತ ಶಾಲೆಯಿದ್ದು ತಾವು ಇದುವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳು ಕೂಡಲೇ ಅಲ್ಲಿನ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಅಕ್ರಮವಾಗಿ ನಡೆಸುತ್ತಿರುವ ಶಾಲೆಯ ಸಂಸ್ಥೆಯವರ ಮೇಲೆ ಕೂಡಲೇ ಕ್ರಮ ಕೈಗೊಳ್ಳದಾಗಿ ಮೌಖಿಕವಾಗಿ ಹಾಗೂ ಲಿಖಿತವಾಗಿ ದೂರು ನೀಡಿದ್ದಾರೆ…
ಈಗಾಗಲೇ ಶಾಲೆ ಪ್ರಾರಂಭವಾಗಿ ಎಲ್ಲ ಮಕ್ಕಳು ಅಡ್ಮಿಶನ್ ಮಾಡಿಸಿ ಶಾಲೆ ಮುಗಿಯುವ ಸಮಯ, ಇಷ್ಟೆಲ್ಲಾ ಮೇಲಿನ ಅಧಿಕಾರಿಗಳಿಗೂ ಗೊತ್ತಿದ್ದರೂ ಕೂಡ ಇದುವರೆಗೆ ಯಾಕೆ ಈ ಸಂಸ್ಥೆಯರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಶಯಕ್ಕೆ ಕಾರಣವಾಗಿದೆ…
ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಈಗತಾನೆ ಆಗಮಿಸಿದ ಶ್ರೀ ಮೋಹನ ದಂಡಿನ ಇವರು ಆ ಶಾಲೆಗೆ ನೋಟೀಸ್ ನೀಡುವ ಮೂಲಕ ಕಾಲ್ ಹರಣ ಮಾಡುತ್ತಿದ್ದಾರೆ ಎಂಬುವುದು ಸಸ್ಪಷ್ಟವಾಗಿ ಕಂಡು ಬರುತ್ತದೆ…
ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗ ಧಾರವಾಡ ಇವರಿಗೆ ಸಾರ್ವಜನಿಕರು ದಿನಾಂಕ: 12-06-2023 ರಂದು ಈ ವಿಷಯವಾಗಿ ದೂರನ್ನು ಸಲ್ಲಿಸಿದ್ದಾರೆ…
ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಮಾಧ್ಯಮದವರು “ಜಯಶ್ರೀ ಶಿಂತ್ರಿ” ಅಪರ ಆಯುಕ್ತರು, ಬೆಳಗಾವಿ ವಿಭಾಗ ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರಿಗೆ ಭೇಟಿ ನೀಡಿದಾಗ…ಅವರು ಹೇಳಿದ್ದು ಇಷ್ಟೇ,ಈ ವಿಷಯವಾಗಿ ನಮ್ಮ ಇಲಾಖೆಯಿಂದ ಬೆಳಗಾವಿ ಉಪನಿರ್ದೇಶಕರಿಗೆ ನಿಯಮಾನುಸಾರ ಪರಿಶೀಲಿಸಿ ವರಧಿ ಸಲ್ಲಿಸಲು ದಿನಾಂಕ: 26-06-2023 ರಂದು ವರ್ಗಾವಣೆ ಮಾಡಿದೀವಿ, ಅವರ ವರಧಿ ನೋಡಿ ಮುಂದಿನ ಕ್ರಮ ಕೈಕೋಳ್ಳಲಾಗುವು ಎಂದು ಹೇಳಿದಾರೆ . ಈಗ 3-4 ತಿಂಗಳು ಕಳೆಯುತ್ತಾ ಬಂದರು ಇದುವರೆಗೂ ಯಾವುದೇ ಕಟ್ಟು ನಿತ್ತಾದ ಕ್ರಮ ಕೈಗೊಂಡಿಲ್ಲ…
ಇಷ್ಟೆಲ್ಲಾ ನಮ್ಮ ಮಾಧ್ಯಮದಲ್ಲಿ ಎಳೆ ಎಳೆಯಾಗಿ ಸಾಕ್ಷಿ ಸಮೇತ ಪ್ರಸಾರ ಮಾಡಿದರು, ಮೇಲಾಧಿಕಾರಿಗಳು ಯಾಕೆ ಕಾಲ್ ಹರಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಗೆ ಪ್ರಶ್ನೆ ಯಾಗಿದೆ…?
ಈಗಲಾದರೂ ಈ ಶಾಲೆ ಸಂಸ್ಥೆಗಳ ಮೇಲೆ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ…
ವರದಿ: ವಿನೋದ್. ಎಂ. ಜೆ.