Join The Telegram | Join The WhatsApp |
ಕಲಘಟಗಿ: ಕೃಷಿ ಪ್ರಧಾನ ದೇಶದಲ್ಲಿ ಇಲ್ಲಿ ರೈತರು ಹೆಚ್ಚಾಗಿ ಕೃಷಿ ಮೇಲೆ ತಮ್ಮ ಜೀವನ ನಡೆಸುತ್ತಿದ್ದು ನೀರಾವರಿ ಸಲುವಾಗಿ ಬೊರವೇಲ್‌ಗಳಿಗೆ ಮೀಟರ ಅಳವಡಿಸಿ ವಿದ್ಯುತ ಬಿಲ್ಲನ್ನು ಕೇಂದ್ರ ಸರ್ಕಾರ ವಸೂಲಿ ಮಾಡುತ್ತಿರುವುದು ಖಂಡನೀಯ ಎಂದು ರೈತ ಸಂಘದ ತಾಲೂಕಾ ಅಧ್ಯಕ್ಷ ಜ್ಯೊತೀಬಾ ಹುಲಕೊಪ್ಪ ಮಾತನಾಡಿದರು.
ಅವರು ಪಟ್ಟಣದ ಆಂಜನೇಯ ಸರ್ಕಲ್‌ನಿಂದ ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡುತ್ತ ತಹಶಿಲ್ದಾರ ಕಚೇರಿ ಆವರಣಕ್ಕೆ ಬಂದು ತಹಶಿಲ್ದಾರ ಯಲ್ಲಪ್ಪ ಗೋಣೆಣ್ಣವರಿಗೆ ಮನವಿ ನೀಡಿ ಮಾತನಾಡುತ್ತ ಸಣ್ಣ ಹಿಡುವಳಿದಾರರೂ ಕೂಡ ಬೊರವೇಲ್ ಕೊರಯಿಸಿದ್ದು ವಿದ್ಯುತ್ ಖಾಸಗಿಕರಣದಿಂದ ಅದನ್ನು ಭರಿಸಲಾಗದೆ ಜಮೀನ್ನು ಮಾರುವುದೊಂದೆ ಪರಿಹಾರವಾಗುತ್ತದೆ ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲವಾಗುತ್ತಿದ್ದು ನೀರುದ್ಯೊಗ ಸಮಸ್ಯೆ ಎದುರಾಗುತ್ತದೆ ಎಂದರು.
ಉಪಾಧ್ಯಕ್ಷ ಮಂಜುನಾಥ ಮಾಳಗಿ ಮಾತನಾಡಿ ರೈತರು ದೇಶದ ಬೆನ್ನೆಲಬು ಮೊದಲೇ ಇಂದಿನ ಯುವಪಿಳಿಗೆ ಕೃಷಿಯಿಂದ ದೂರ ಸರಿಯುತ್ತಿದ್ದು ಕೇಂದ್ರ ಸರ್ಕಾರದ ಈ ಧೊರಣೆಯನ್ನು ಕೈಬೀಡಬೇಕು ವಿದ್ಯುತ್ ಕಂಪನಿ ಖಾಸಗಿಕರಣ ಮಸೂದೆಯನ್ನು ವಾಪಸ್ಸ ಪಡೆಯಬೇಕು ಎಂದರು.
ಪ್ರತಿಭಟನೆಯಲ್ಲಿ ಶಂಕರಗೌಡ ಭಾವಿಕಟ್ಟಿ, ಫಕ್ಕಿರಪ್ಪ ಪೂಜಾರಿ, ಚೈತ್ರಾ ಅಂಗಡಿ,ಶoಕ್ರಮ್ಮ ಸುತಾರ,ಮಾದೇವಿ ಕುಬ್ಯಾಳ ಮಲ್ಲೇಶ ಮಿರ್ಜಿ, ದ್ಯಾಮಣ್ಣ ಅಣಿಗೇರಿ ಮಂಜುನಾಥ ಬಮ್ಮಿಗಟ್ಟಿ, ಹನುಮಂತ ಹರಿಜನ ಚನ್ನಬಸಪ್ಪ ಹೊನ್ನಿಹಳ್ಳಿ ಬಸವರಾಜ ಕಳ್ಳಿಮನಿ ಇದ್ದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |