- ಶಿವಮೊಗ್ಗ: ರೈತರ ಮೇಲೆ ದೌರ್ಜನ್ಯ,ಹಕ್ಕು ಪತ್ರ ವಜಾ ಖಂಡಿಸಿ ಪ್ರತಿಭಟನೆ.
ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಗ್ರಾಮದ ಬಗರಹುಕುಂ ಸಾಗುವಳಿದರರಿಗೆ ನೀಡಲಾಗಿರುವ ಹಕ್ಕು ಪತ್ರಗಳನ್ನು ವಜಾ ಗೊಳಿಸಿರುವ ಕ್ರಮ ಖಂಡನೀಯ.
ತಕ್ಷಣವೇ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿ ಮುಖಂಡ ನಾ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಬುಧವಾರ ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತರಿಗೆ ನ್ಯಾಯ ಕಲ್ಪಿಸದಿದ್ದರೆ ಜನ ಪ್ರತಿನಿಧಿಗಳಿಗೆ ಘೇರಾವ್ ಹಾಕುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ : ಮಂಜುನಾಥ ರಜಪೂತ