ಹುಕ್ಕೇರಿ :- ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿ. ಜೆ. ಪಿ. ರೈತ ಮೋರ್ಚಾ ಮತ್ತು ಹುಕ್ಕೇರಿ ಮಂಡಲ ಹಾಗೂ ನಿರ್ದೇಶಕರು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಟನೆ ವತಿಯಿಂದ ಪ್ರತಿಭಟನೆ
ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆ, ವಿದ್ಯುತ್ ಅಭಾವದಿಂದ ರೈತರ ಪಂಪ್ಸೆಟಗಳಿಗೆ ಅನಿಯಮಿತ ಲೋಡ್ ಶೇಡ್ಡಿಂಗ, ರೈತ ಪರ ಯೋಜನೆಗಳನ್ನು ರದ್ದುಗೊಳಿಸಿರುವುದು ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತದೆ.
ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲ ಸಮಸ್ಯೆ ಉಂಟಾಗಿದೆ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಪ್ರತಿ ವರ್ಷ ಸಂಗ್ರಹವಾಗಬೆಕ್ಕಿದ್ದ ನೀರಿನ ಪ್ರಮಾಣವು ಕುಸಿತ ಕಂಡಿದ್ದು ಇದರಿಂದ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವುದು ಕಂಡು ಬರುತ್ತದೆ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಅಭಾವದಿಂದ ರೈತರ ಪಂಪ್ಸೆಟಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ ಏಳು ಘಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕಾಗಿತ್ತು ಆದರೆ ಇತ್ತೀಚಿಗೆ ಅನಿಯಮಿತ ಲೋಡ್ ಸೆಡ್ಡಿಂಗಳ ಪರಿಣಾಮ ಹಗಲು ಹೊತ್ತಿನಲ್ಲು ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ.
ಎಂದು ಉದ್ಯಮಿ ಯುವದೂರಿನ ರಾದ ಪವನ ಕತ್ತಿ ಮಾಧ್ಯಮದೊಂದಿಗೆ ಹೇಳಲಾಯಿತು ಹುಕ್ಕೇರಿ ತಾಲೂಕಿನ ಉಪ ತಶೀಲ್ದಾರಾದ ಎನ್. ಆರ್. ಪಾಟೀಲ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ
ಜಿಲ್ಲಾ ಅಧ್ಯಕ್ಷ ಸತ್ತೇಪ್ಪಾ ನಾಯಿಕ್, ಬಿ. ಜೆ. ಪಿ. ಹಿರಿಯ ಮುಖಂಡರಾದ ಗುರುರಾಜ್ ಕುಲಕರ್ಣಿ, ರಾಜೇಶ್ ನೇರಲಿ, ರವೀಂದ್ರ ಬಸವಂತ ಹಿಡಕಲ್, ರಾಜು ಮುನ್ನೊಳಿ, ಶಿವಣ್ಣ ಗೌಡ ಪಾಟೀಲ್ ಹಾಗೂ ಅನೇಕ ಭಾರತೀಯ ಜನತಾ ಪಾರ್ಟಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೇಶಗೊಳ