Ad imageAd image
- Advertisement -  - Advertisement -  - Advertisement - 

ರಾಜ್ಯ ಸರ್ಕಾರದ ಪೆಟ್ರೋಲ್ ,ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ತಾಲೂಕು ಬಿಜೆಪಿ ಘಟಕದಿಂದ ಪ್ರತಿಭಟನೆ

Bharath Vaibhav
ರಾಜ್ಯ ಸರ್ಕಾರದ ಪೆಟ್ರೋಲ್ ,ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ತಾಲೂಕು ಬಿಜೆಪಿ ಘಟಕದಿಂದ ಪ್ರತಿಭಟನೆ
WhatsApp Group Join Now
Telegram Group Join Now

ಮೊಳಕಾಲ್ಮೂರು:-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಬಡವರ ರೈತರ ಶೋಷಿತರ ಪರವಾಗಿ ಸದಾ ನಾವು ಅವರ ಹಿತ ಕಾಯುತ್ತೇವೆ ಎಂದು ಹೇಳಿ ಈಗ ಎಲ್ಲಾ ಬೆಲೆಗಳನ್ನು ಹೆಚ್ಚಳ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕರಾದ ಎಸ್ ತಿಪ್ಪೇಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಗುರುವಾರ ಬಿಜೆಪಿ ಕಾರ್ಯಾಲಯದಿಂದ ಪ್ರತಿಭಟನೆ ಮಾಡಿ ಮುಖ್ಯ ರಸ್ತೆಯ ಮೂಲಕ ಕೆಇಬಿ ವೃತ್ತದಲ್ಲಿ ರಸ್ತೆ ತಡೆ ಮಾಡಿ ತಹಸಿಲ್ದಾರರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಅವರು ಮಾತನಾಡಿ ಗ್ಯಾರೆಂಟಿಗಳ ಗುಂಗಿನಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿದೆ ಸಾಮಾನ್ಯ ಜನಗಳು ಬದುಕುವುದೇ ಕಷ್ಟವಾಗಿದೆ ಎಲ್ಲಾ ಬೆಲೆ ಹೇಳಿಕೆಗಳು ಹೆಚ್ಚಳದಿಂದ ಸಾಮಾನ್ಯ ಜನ ಸರ್ಕಾರಕ್ಕೆ ಇಡಿ ಶಾಪ ಹಾಕುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಡಾ. ಪಿಎಂ ಮಂಜುನಾಥ್ ರವರು ಮಾತನಾಡಿ ಗ್ಯಾರಂಟಿಗಳು ಎಂದರೆ ಯಡಿಯೂರಪ್ಪನವರ ಸರ್ಕಾರವಿದ್ದಾಗ ಭಾಗ್ಯಲಕ್ಷ್ಮಿ ಬಾಂಡ್ ಈಗ ಮಗುವಿಗೆ ಒಂದು ಲಕ್ಷ ನೀಡುತ್ತಿದ್ದಾರೆ ಗ್ಯಾರೆಂಟಿ ಎಂದರೆ ಇತರ ಇರಬೇಕು ಎಂದರು.
ಅಷ್ಟೇ ಅಲ್ಲದೆ ಅಧಿಕಾರಕ್ಕ ಒಂದಾಗಿನಿಂದಲೂ ಗ್ಯಾರಂಟಿಗಳಿಗೆ ಹಣ ಒಂದು ಸುವುದೇ ಒಂದು ಕೆಲಸವಾಗಿದೆ ಸಾಮಾನ್ಯ ಜನಗಳ ಕೃಷಿಕರ ಪಾಡೇನು  ಸಿದ್ದರಾಮಯ್ಯನವರ 15ಕ್ಕೂ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಾರ್ದಿಕ ತಜ್ಞರಾದ ನೀವುಗಳು ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿಗಳ ಸಂಪನ್ಮೂಲ ಒಂದು ಸಲ ಯಾವುದೇ ಕಾರಣಕ್ಕೂ ಅನ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಹೇಳಿದ ನೀವು ನುಡಿದಂತೆ ನಡೆಯದ ಸರ್ಕಾರ ಎಂದು ಸಾಬೀತು ಮಾಡಿದ್ದೀರಾ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ನ ಪರಾಜಿತ ಅಭ್ಯರ್ಥಿ ವೀರಭದ್ರಪ್ಪ ಮತ್ತು ಶ್ರೀರಾಮರೆಡ್ಡಿ, ರಾಮರೆಡ್ಡಿ, ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತು ಬೆಲೆ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ರವಿ ಮಾಜಿ ಅಧ್ಯಕ್ಷರಾದ ಎಂ ಎನ್ ಮಂಜಣ್ಣ ನಗರ ಘಟಕದ ಅಧ್ಯಕ್ಷರಾದ ಕಿರಣ್ ಗಾಯಕ್ವಾಡ್ ಪಂಚಾಯತಿ ಸದಸ್ಯರಾದ ತಿಪ್ಪೇಸ್ವಾಮಿ ಸಿದ್ದಣ್ಣ ಮತ್ತು ಮುಖಂಡರಾದ ಮೂರ್ತಿ ಮಹೇಶ್ ಪ್ರಭಾಕರ್ ಸಿದ್ದಾರ್ಥ್ ಚಂದ್ರು ಕರಿ ಬಸಣ್ಣ ಹೇಮಂತ್ ದರ್ಶನ್ ಕುಮಾರ್ ತಿಪ್ಪೇಸ್ವಾಮಿ ರಾಯಪುರದ ನಾಗರಾಜ್ ಬಿಜೆಪಿ ಕಾರ್ಯಕರ್ತರು ಮುಖಂಡರು ಇನ್ನು ಹಲವು ಉಪಸ್ಥಿತರಿದ್ದರು.

ವರದಿ:- ಪಿಎಂ ಗಂಗಾಧರ

 

WhatsApp Group Join Now
Telegram Group Join Now
Share This Article
error: Content is protected !!