Join The Telegram | Join The WhatsApp |
ಲಿಂಗಸೂರ: ಪಿಯುಸಿ ಪ್ರಥಮ ವರ್ಷದ ವಿಜ್ಞಾನ ಓದುವ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದಲ್ಲಿ ಜರುಗಿದೆ. ತಾಲೂಕಿನ ಗೋನ್ವಾಟ್ಲ ತಾಂಡದ ಐಶ್ವರ್ಯ ತಂದಿ ಚಂದಪ್ಪ ವಯಸ್ಸು 17 ಎನ್ನುವ ವಿದ್ಯಾರ್ಥಿನಿ ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ಓದುತ್ತಿದ್ದಲ್ಲಿ ವಿಸಿಬಿ ಕಾಲೇಜಿನಲ್ಲಿಇರುವ ವಸತಿ ನಿಲಯದಲ್ಲಿ ವಾಸವಾಗಿದ್ದಳು ಎನ್ನಲಾಗುತ್ತಿದೆ ಶುಕ್ರವಾರ ಮಧ್ಯಾಹ್ನ ಊಟಕ್ಕೆ ವಸತಿ ನಿಲಯಕ್ಕೆ ಬಂದು ಊಟ ಮಾಡಿದ್ದಾರೆಂದು ಹೇಳುತ್ತಿದ್ದು ತದನಂತರದಲ್ಲಿ ಎಲ್ಲಾ ವಿದ್ಯಾರ್ಥಿ ನಿಯರು ಕಾಲೇಜಿಗೆ ತೆರಳಿದಾಗ ಒಬ್ಬಳೇ ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗುತ್ತಿದೆ .ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪರಿಶೀಲನೆ ನಡೆಸಿದ್ದಾರೆ.ತಡೆ ರಾತ್ರಿಯವರಿಗೂ ಪ್ರಕರಣ ದಾಖಲಾಗಿರಲಿಲ್ಲವೆಂದು ತಿಳಿದು ಬಂದಿದೆ.
ವರದಿ.ಶಾಮೀದ್ಅಲಿ ಕರಡಕಲ್
Join The Telegram | Join The WhatsApp |