Ad imageAd image
- Advertisement -  - Advertisement -  - Advertisement - 

ರಾಜಗೋಪಾಲ ನಗರದ ಸನ್ಮತಿ ಶಾಲೆಯ 2024-25ನೇ ಪ್ರಾರಂಭೋತ್ಸವ: ಮಕ್ಕಳಿಗೆ ಸ್ವಾಗತ ಸಂಭ್ರಮ”

Bharath Vaibhav
ರಾಜಗೋಪಾಲ ನಗರದ ಸನ್ಮತಿ ಶಾಲೆಯ 2024-25ನೇ ಪ್ರಾರಂಭೋತ್ಸವ: ಮಕ್ಕಳಿಗೆ ಸ್ವಾಗತ ಸಂಭ್ರಮ”
WhatsApp Group Join Now
Telegram Group Join Now

ಬೆಂಗಳೂರು: –ಪೀಣ್ಯ,ದಾಸರಹಳ್ಳಿ ಪೀಣ್ಯ 2ನೇ ಹಂತದಲ್ಲಿ ಗುಣಮಟ್ಟ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಅರ್ಕೇಶ್ ರವರ ನೇತೃತ್ವದ ಸನ್ಮತಿ ವಿದ್ಯಾಸಂಸ್ಥೆ(ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆ)ಯು 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಅಂಗವಾಗಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ

ಸರಸ್ವತಿ ಪೂಜೆ ನೆರವೇರಿಸಿದರು ನಂತರ ಶಾಲೆಯ ಕಾರ್ಯದರ್ಶಿ ಅರ್ಕೇಶ್ ಮಾತನಾಡಿ, ‘ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ರೂಪಿಸುವುದು ನಮ್ಮ ವಿದ್ಯಾಸಂಸ್ಥೆಯ ಗುರಿಯಾಗಿದೆ. ಹಾಗಾಗಿ ಮಕ್ಕಳಿಗೆ ನಮ್ಮ ಶಾಲೆಯಲ್ಲಿ ಮನೆಯ ವಾತಾವರಣ ಸೃಷ್ಟಿಸುವ ಮೂಲಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಾರಂಭೋತ್ಸವದ ದಿನವೇ ಮಕ್ಕಳು ಓದುವೆವೆಂಬ ಪ್ರತಿಜ್ಞೆ ಮಾಡುವಂತೆ ಕಾರ್ಯಕ್ರಮ ರೂಪಿಸಿದ್ದೇವೆ’, ಎಂದು ಕಾರ್ಯದರ್ಶಿ ಅರ್ಕೇಶ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಪ್ರಖ್ಯಾತ ಜಾದೂಗಾರರಾದ ಆರ್ಯಭಟ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಕಡಬ ಶ್ರೀನಿವಾಸ್ ರವರಿಂದ ಜಾದೂ ಪ್ರದರ್ಶನ ಹಾಗೂ ಖ್ಯಾತ ಜಾನಪದ ಕಲಾವಿದ ಮತ್ತು ದೂರದರ್ಶನ ಕಲಾವಿದ ಕುಣಿಗಲ್ ರಾಮಚಂದ್ರರವರಿಂದ ಜಾನಪದ ಹಾಡುಗಳನ್ನು ಹಾಡಿ ಮಕ್ಕಳನ್ನು ಪ್ರೀತಿಯಿಂದ ಸಂಭ್ರಮದ ಮೂಲಕ ಬರಮಾಡಿಕೊಂಡು ಸ್ವಾಗತಿಸಲಾಯಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಕಡಬ ಶ್ರೀನಿವಾಸ್ ಅವರು ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಹಲವು ಜಾದುಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳನ್ನು ಮನರಂಜಿಸಿದರು.

ಜಾನಪದ ಸೊಗಡಿನ ಗೀತೆಗಳನ್ನು ಹಾಡುವ ಮೂಲಕ ಮಕ್ಕಳಿಗೆ ನೆಲದ ಸಂಸ್ಕೃತಿಯ ಬಗ್ಗೆ ಮನನ ಮಾಡಿಸಿದರು.ಈ ವೇಳೆ ಮಾತನಾಡಿದ ಜಾದೂಗಾರ ಕಡಬ ಶ್ರೀನಿವಾಸ್, ‘ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಸನ್ಮತಿ ವಿದ್ಯಾಸಂಸ್ಥೆಯು ಎಲ್ಲಾ ರೀತಿಯ ಚಟುವಟಿಕೆಗಳನ್ನು ಹಾಗೂ ಯೋಜನೆಗಳನ್ನು ರೂಪಿಸಿ ಶಿಕ್ಷಣ ನೀಡುತ್ತಿದ್ದು ಈ ಸದುಪಯೋಗ ಮಕ್ಕಳು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಯುತ ಜೀವನ ನಡೆಸುವಂತಾಗಬೇಕು’, ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರವಿ, ದೈಹಿಕ ಶಿಕ್ಷಕ ರವಿ ಟಿ, ಶಿಕ್ಷಕರಾದ ಚನ್ನಬಸಯ್ಯ, ಮನು, ಶಿಕ್ಷಕಿಯರಾದ ಶಶಿಕಲಾ ದೇವಿ, ಶಶಿಕಲಾ, ನಿಶಿ ಎಂ, ರೆಹನಾ, ಕುಮಾರಿ, ರೇಷ್ಮಾ, ಶಕೀಲಾ, ದಿವ್ಯಾ, ನೇತ್ರಾ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ರಾಜಗೋಪಾಲನಗರದ ಸಮಸ್ತ ನಾಗರಿಕ ಬಂಧು ಭಗನಿಯರು ಉಪಸ್ಥಿತರಿದ್ದರು.

ವರದಿ:-ಅಯ್ಯಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!