Join The Telegram | Join The WhatsApp |
ಗುಳೇದಗುಡ್ಡ: ಪಟ್ಟಣದ ಬನ್ನಿ ಕಟ್ಟಿ ಓಣಿಯ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಆಕಳೊಂದು ಅವಳಿ ಹೋರಿ ಕರುಗಳಿಗೆ ಜನ್ಮ ನೀಡಿದ್ದು, ಆ ಹೋರಿ ಕರುಗಳ ನಾಮಕರಣ ಕಾರ್ಯಕ್ರಮ ನೆರವೇರಿತು.
ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನಕ್ಕೆ ಬಿಟ್ಟಿದ್ದ ಆಕಳು ಇತ್ತೀಚೆಗೆ ಹೋರಿ ಅವಳಿ ಕರುಗಳಿಗೆ ಜನ್ಮ ನೀಡಿತ್ತು. ಅದಕ್ಕೆ ಸೋಮವಾರ ಶ್ರೀ ತ್ರ್ಯಂಬಕೇಶ್ವರ ಗೆಳೆಯರ ಬಳಗದಿಂದ ಆಯೋಜಿಸಿದ್ದ ನಾಮಕರಣದ ಕಾರ್ಯಕ್ರಮದಲ್ಲಿ ರಾಮ, ಲಕ್ಷ್ಮಣ ಎ೦ದು ಹೆಸರು ಇಡಲಾಯಿತು.
ದೇವಸ್ಥಾನದ ಆವರಣದಲ್ಲಿ ನಾಮಕರಣದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಟ್ಟಿದ್ದ ತೊಟ್ಟಿಲುಗಳಲ್ಲಿ ಹೋರಿ ಕರುಗಳನ್ನು ಹಾಕಿ, ತೊಟ್ಟಿಲ ಕೆಳಗೆ ದೀಪ ಹಚ್ಚಿ ಪೂಜಿಸಿದರು. ಬಳಿಕ ಬನಿ ಕಟ್ಟಿ ಓಣಿಯ ಮಹಿಳೆಯರು ಹೋರಿ ಕರುಗಳಿಗೆ ಶ್ರೀ ತ್ರ್ಯಂಬಕೇಶ್ವರ, ಶ್ರೀಸಿದ್ದಾರೂಢ, ಶ್ರೀನಾಗಲಿಂಗ, ಶ್ರೀಲವ ಕುಶ ಹಾಗೂ ಶ್ರೀ ರಾಮ ಲಕ್ಷಣ ಎಂದು ಐದು ಹೆಸರುಗಳನು ನಾಮಕರಣ ಮಾಡಿದರು. ಶಾಸ್ರೋಕ್ತವಾಗಿ ನಾಮ ಕರಣ ಮಾಡಿದರು.
ಶ್ರೀ ದಾನಮ್ಮದೇವಿ ದೇವಸ್ಥಾನದ ಅರ್ಚಕರಾದ ಶಿವಪ್ಪಯ್ಯನಮಠ ಅವರು ಮೊದಲಿಗೆ ಹೋರಿ ಕರುಗಳ ಕಿವಿಗಳಲ್ಲಿ ಐದು ಪ್ರಯುಕ್ತ ಹೆಸರುಗಳನ್ನು ಹೇಳಿ ವಿವಿಧ ಪೂಜಾ
ಶಿವಲೀಲಾ ಕಳ್ಳಿಗುಡ್ಡ, ಬಸಮ್ಮ ಕಳ್ಳಿಗುಡ್ಡ, ನಂದಾ ಕಳ್ಳಿಗುಡ್ಡ, ರೇಣುಕಾ ಕೊಣ್ಣೂರ, ವಿದ್ಯಾ ಮುರುಗೋಡ ಅವರು ಹೋರಿ ಕರುಗಳಿಗೆ ಸಂಪ್ರದಾಯ ಬದ್ಧವಾಗಿ ಹೆಸರುಗಳನ್ನು ಇಟ್ಟರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಅವರ ಬೆನ್ನು ಚಪ್ಪರಿಸಿ ಸಂಪ್ರದಾಯ ಮರೆದರು.
.ಸಂಪ್ರದಾಯಬದ್ದವಾಗಿ ಮತ್ತು ವಿಶೇಷ ರೀತಿಯಿಂದ ಹೋರಿ ಕರುಗಳಿಗೆ ನಾಮಕರಣ ಕಾರ್ಯಕ್ರಮ ಜರುಗಿದ್ದು ಈ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಹೋರಿ ಕರುಗಳ ಈ ನಾಮಕರಣದಲ್ಲಿ ಈಶ್ವರ ಮುರುಗೋಡ, ಮಲ್ಲಯ್ಯ ತುಪದ, ರವಿ ಮುರುಗೋಡ, ಈರವ ಕರಬಂದ, ಗುಂಡಬಸಪ್ಪ ಮುರುಗೋಡ, ಹನಮಂತಪ್ಪ ಕರಬಂದ, ಸುನೀಲ ಅಂಗಡಿ, ಸುರೇಶ ಮುರುಗೋಡ, ಮುತ್ತು ಕೊಣ್ಣೂರ, ಈಶ್ವರ ಹಾದಿಮನಿ, ಕೃಷ್ಣಾ ಬೀಳಗಿ, ನಿಂಗಪ್ಪ ಪುರ್ತಗೇರಿ, ಹುಚ್ಚೇಶ ಕರಬಂಧ, ಪ್ರದೀಪ ಮುರುಗೋಡ, ಈರಪ್ಪ ಕರಬಂದ, ನಾಗೇಶ ಕೋಟಿಕಲ್ಲ, ಮಂಜುಳಾ ಮುರಗೋಡ, ಜ್ಯೋತಿ ಹಾದಿಮನಿ, ಶೇಖಪ್ಪ ಮುರುಗೋಡ, ವೀರೇಶ ಹುನಗುಂದ, ಶಿವು ಕೊಣ್ಣೂರ ಹಾಗೂ ಮತ್ತಿತರರು ಇದ್ದರು.
ವರದಿ: ಮಹಾಲಿಂಗೇಶ ಯಂಡಿಗೇರಿ
Join The Telegram | Join The WhatsApp |