Join The Telegram | Join The WhatsApp |
ಅಥಣಿ: ಮಲಾಬಾದ ಗ್ರಾಮದಲ್ಲಿ ಪಂಚಾಯತ ಮಟ್ಟದ್ದಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮುಲ್ಲಾ ಅಸಿಯೋಸಿಯನ್ ಘಟಕದ ಗ್ರಾಂ ಪಂ ಮಟ್ಟದಲ್ಲಿ ಸಲಹಾ ಸಮಿತಿ ಮಾಡಲಾಗಿದ್ದು ಇದೊಂದು ಮುಸ್ಲಿಂ ಸಮುದಾಯದ ಬಾಂಧವರ ಏಳಿಗೆಗೆ ಸಹಕಾರಿಯಾಗಲಿದೆ ಎಂದು ಮುಲ್ಲಾ ಸಮುದಾಯ ಮುಖಂಡ ಮಹಮ್ಮದ್ ಮುಲ್ಲಾ ಅವರು ಅಭಿಮತ ವ್ಯಕ್ತಪಡಿಸಿದರು.
ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲಾಬಾದ ಗ್ರಾಮದಲ್ಲಿ ಪ್ರತಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತಾನಾಡಿದ ಅವರು ಮುಲ್ಲಾ (ಮುಸ್ಲಿಂ) ಸಮುದಾಯದ ಬಾಂಧವರನ್ನು ಒಟ್ಟುಗೂಡಿಸಿ ಸರ್ವತೋಮುಖ ಅಭಿವೃದ್ಧಿಗೆ ಈ ಸಂಘಟನೆ ಸಹಕಾರಿಯಾಗಲಿದ್ದು ಮುಂದಿನ ದಿನಮಾನಗಳಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮುಲ್ಲಾ ಅಸಿಯೋಸಿಯನ್ ಘಟಕಗಳು ಪ್ರಾರಂಭವಾಗಲ್ಲಿದ್ದು ಎಲ್ಲಾ ಮುಲ್ಲಾ (ಮುಸ್ಲಿಂ) ಸಮುದಾಯದ ಬಾಂಧವರು ಈ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮುದಾಯದ ಜನರಿಗೆ ಕರೆ ನೀಡಿದರು.
ನಂತರ ಈ ಸಂದರ್ಭದಲ್ಲಿ ಮಲಾಬಾದ ಗ್ರಾಮ ಪಂಚಾಯಿತಿ ಮಟ್ಟದ ಸಲಹಾ ಸಮಿತಿ ಮುಲ್ಲಾ ಅಸಿಯೋಸಿಯನ್ ಘಟಕ ಅಧ್ಯಕ್ಷರಾಗಿ ಆಯ್ಕೆಯಾದ ರಮಜಾನ ಕಮಾಲಸಾಬ್ ಮುಲ್ಲಾ ಉಪಾಧ್ಯಕ್ಷರಾಗಿ ದಾವಲ್ ಹಸನಸಾಬ ಮುಲ್ಲಾ,ಸಹ ಕಾರ್ಯದರ್ಶಿ ದಾವಲ ನಿಜಾಂ ಮುಲ್ಲಾ,ಖಜಾಂಚಿ ಮೋದಿನ ಮೌಲಾ ಮುಲ್ಲಾ, ಸಂಚಾಲಕರಾಗಿ ವಸಿಮ್ ಇಕ್ಬಾಲ್ ಮುಲ್ಲಾ, ಜಂಗ್ಲಿ ಸಾಬ ಮೌಲಾ ಮುಲ್ಲಾ ,ಖಾಜಾವಾಲಿ ದಾವಲ್ ಮುಲ್ಲಾ,ಸುರಜ್ ಅಯೋಬ್ ಮುಲ್ಲಾ,ಜಾಹಾಗಿಂರ ಇಕ್ಬಾಲ್ ಮುಲ್ಲಾ,ಸೀಕಂದರ್ ಮಕತಮ್ ಮುಲ್ಲಾ, ಹಾಗೂ ಯಾಸೀನ ರಸೀದ ಮುಲ್ಲಾ ಅವರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮೈನುದ್ದಿನ ಮುಲ್ಲಾ,ಕಮಲಾಸಾಬ್ ಮುಲ್ಲಾ,ರಜಾಕ ಮುಲ್ಲಾ, ರಾಜು ಜಮಾದಾರ ಮುಲ್ಲಾ,ಮುಜುಬ್ ಕಮಾಲ್ ಮುಲ್ಲಾ ಸುಬೇದಾರ್ ಆದಾಮ್ ಮುಲ್ಲಾ, ಒನೇಕ ಮುಲ್ಲಾ ಸಮುದಾಯ ಮುಖಂಡರು ಉಪಸ್ಥಿತರಿದ್ದರು.
ವರದಿ: ಅಬ್ಬಾಸ ಮುಲ್ಲಾ.
Join The Telegram | Join The WhatsApp |