Join The Telegram | Join The WhatsApp |
ಸೇಡಂ:- ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ಅವರ ಕನ್ನಡ ನಾಡ ನುಡಿ ಪರ ಹೋರಾಟ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸೋಶಿಯಲ್ ಕ್ಲಬ್ ರಾಜ್ಯ ಘಟಕ ಹುಬ್ಬಳ್ಳಿ ಹಾಗೂ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ 2022-23ನೇ ಸಾಲಿನ ಕನ್ನಡ ನುಡಿ ಸಂಭ್ರಮ ರಾಜ್ಯ ಮಟ್ಟದ ಕವಿ ಕಾವ್ಯ ಸಮೀಲನ ಕಾರ್ಯಕ್ರಮದಲ್ಲಿ ದಿನಾಂಕ/13-11-2022ರ ರವಿವಾರದಂದು 9 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಭವನ ಆರ್,ಎಸ್ ಶೆಟ್ಟಿ ಕ್ರೀಡಾಂಗಣದ ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಯುತ ರಾಮಚಂದ್ರ ಗುತ್ತೇದಾರ್ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಸೇಡಂ ಇವರಿಗೆ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ಚಂದ್ರಶೇಖರ ಮಡಲಗೇರಿ ಅದ್ಯಕ್ಷರು ಸೋಶಿಯಲ್ ಕ್ಲಬ್ ಹುಬ್ಬಳ್ಳಿ ಹಾಗೂ ಧಾರವಾಡ ಅವರು ತಿಳಿಸಿದ್ದಾರೆ.
ವರದಿ ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |